ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಷ್ಟು ದಿನವೆಂದು ಹೀಗೇ ದುಡಿಯುತ್ತೀರಾ?!

ಉಹ್ಞೂಂ, ಅದು ನಮಗೇ ಗೊತ್ತಿರುವುದಿಲ್ಲ. ಬೆಳಗಾಯಿತು ಕೆಲಸಕ್ಕೆ ಹೋಗು, ಕತ್ತಲಾಯಿತು ಮನೆಗೆ ಬಾ, ದಿನವಿಡೀ ದುಡಿದು ದಣಿದಿದ್ದೀಯಾ ಮಲಗು, ಬೆಳಿಗ್ಗೆ ಮತ್ತೆ ಬೇಗ ಏಳು, ದುಡಿಯಲು ಹೋಗಬೇಕಲ್ಲ ಹೊರಟು ಬಿಡು... ಎಲ್ಲೋ ಒಂದು ಭಾನುವಾರ, ಯಾವುದೋ ಹಬ್ಬ, ಹತ್ತಿರದವರ ಮನೆಯಲ್ಲಿನ ವಿಶೇಷ ಇಂತಹ ಕೆಲವೇ ಕೆಲವು ದಿನಗಳನ್ನು ಬಿಟ್ಟರೆ ‘ನನ್ನದೆನ್ನುವ ಬದುಕನ್ನು ನಾನೇ ಕಟ್ಟಿಕೊಳ್ಳಬೇಕು’ ಎಂದು ನಿರ್ಧರಿಸಿಕೊಂಡ ದಿನದಿಂದ ದುಡಿಯಲಾರಂಭಿಸಿದವರು ಉಸಿರು ನಿಲ್ಲಿಸುವವರೆಗೂ ದುಡಿಯುತ್ತಲೇ ಇದ್ದು ಬಿಡುತ್ತೇವಲ್ಲವಾ? ಹಾಗೆ ದುಡಿಯದಿದ್ದರೆ ಬದುಕುವುದು ಹೇಗೆ? ನಮ್ಮ ಲೈಫ್‌ನ್ನು ನಾವು ನೆಮ್ಮದಿಯಾಗಿ ಬದುಕಬೇಕೆಂದರೆ ದುಡಿಯುವ ವಯಸ್ಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿಯಬೇಕಷ್ಟೇ ಎಂದು ಕೀ ಕೊಟ್ಟ ಗೊಂಬೆಯಂತೆ ದಿನಬೆಳಗಾದರೆ ದುಡಿಮೆಗೆ ನಿಲ್ಲುವ ನೀವು ಹೇಳಬಹುದು. ಸರಿ, ಒಪ್ಪಿಕೊಳ್ಳೋಣ. ಹಾಗಿದ್ದರೆ ಹೀಗೆ ದುಡಿಯುತ್ತಲೇ ಇರುವುದೇ ನಿಮ್ಮ ಬದುಕಾ? ಬೆಳಗಾಯಿತು ಹೊರಡು, ರಾತ್ರಿ ಬರುವಾಗ ಸುಸ್ತಾಗಿ ಹೈರಾಣಾಗಿ ಹೋಗಿರುತ್ತೀಯಾ ಸುಮ್ಮನೆ ರೆಸ್ಟ್ ಮಾಡು ಎನ್ನುವಂತಹ ಜೀವನವನ್ನು ನೀವು ನಡೆಸುತ್ತಿರುವುದೇ ಹೌದಾದರೆ ನಿಮ್ಮ ಬದುಕು ಇನ್ನೇನಾಗಿರಲಿಕ್ಕೆ ಸಾಧ್ಯವಿದೆ? ಇನ್ನೇನೂ ಆಗಿರುವುದಿಲ್ಲ. ಪ್ರತೀ ತಿಂಗಳು ನನಗೆ ಇಂತಿಷ್ಟು ಹಣ ಸಂಬಳ, ಲಾಭ ಸೇರಿದಂತೆ ಯಾವುದಾದರೂ ಒಂದು ರೂಪದಲ್ಲಿ ಬರಬೇಕು. ಹಾಗೆ ಬಾರದೇ ಹೋದರೆ ಸಣ್ಣ ಕಿಂಡಿಯೂ ಇಲ್ಲದ ಕೋಣೆಯೊಂದರಲ್ಲ

ಹಳ್ಳಿ ಹಳ್ಳಿಗಳಿಗೂ ಹಂಚಬೇಡಿ ಕೊರೋನಾ!

ಇಮೇಜ್
‘ಕೊರೋನಾದ ಭಯ ಇರುವುದು ಪಟ್ಟಣಗಳಿಗೇ ಹೊರತು, ಗ್ರಾಮಗಳಿಗಲ್ಲ. ಗ್ರಾಮಗಳ ಜನರು ಸುರಕ್ಷಿತವಾಗಿದ್ದಾರೆ. ಗ್ರಾಮಗಳಲ್ಲಿ ಕೊರೋನಾ ಅಷ್ಟು ಸುಲಭಕ್ಕೆ ಹರಡುವುದಿಲ್ಲ’ ಎಂದು ಕೊರೋನಾ ಕಾಲಿಟ್ಟಾಗಿನಿಂದಲೂ ಹೇಳಲಾಗುತ್ತಿತ್ತು. ಇದು ನಿಜವೂ ಕೂಡಾ. ಆದ್ದರಿಂದಲೇ ಪಟ್ಟಣ ಸೇರಿದ್ದ ಹಳ್ಳಿಯ ಜನರೆಲ್ಲರೂ ಕೊರೋನಾದ ಹೆದರಿಕೆಯಿಂದಾಗಿಯೇ ಮತ್ತೆ ಹಳ್ಳಿ ಸೇರಿಕೊಂಡರು. ನಮ್ಮ ರಾಜ್ಯದ ಇಲ್ಲಿಯವರೆಗಿನ ಕೊರೋನಾ ಪ್ರಕರಣಗಳನ್ನು ಗಮನಿಸಿದರೆ, ಹೆಚ್ಚಿನ ಪ್ರಕರಣಗಳು ಹಳ್ಳಿಗಳಿಂದ ವರದಿಯಾಗಿಲ್ಲ. ಅಷ್ಟರಮಟ್ಟಿಗೆ ನಮ್ಮೆಲ್ಲ ಹಳ್ಳಿಗಳೂ ಸುರಕ್ಷಿತವಾಗಿವೆ.  ಇದನ್ನು ಸಮರ್ಥಿಸುವಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ, ‘ಹಳ್ಳಿಗಳಿಗೆ ಕೊರೋನಾ ಹರಡದಂತೆ ನೋಡಿಕೊಳ್ಳಿ, ಸಾಧ್ಯವಾದಷ್ಟು ಹಳ್ಳಿಗಳು ಕೊರೋನಾಮುಕ್ತವಾಗಿರುವಂತೆ ನಾವೆಲ್ಲರೂ ಎಚ್ಚರ ವಹಿಸಬೇಕಾಗಿದೆ’ ಎಂದು ಕೂಡಾ ಹೇಳಿದ್ದರು. ಆದರೆ ಈಗ ನೋಡಿದರೆ, ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿರುವಂತಹ ಹೊರರಾಜ್ಯದ ಪ್ರಮುಖ ಪಟ್ಟಣಗಳಿಂದ ಬಂದವರನ್ನು ಕೂಡಾ ಗಡಿಯಲ್ಲಿ ಜಿಲ್ಲಾಡಳಿತ ಪರೀಕ್ಷಿಸಿ ಹಳ್ಳಿಗಳಿಗೆ ಕಳಿಸಿ, ಅವರನ್ನು ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡುತ್ತಿದೆ. ಇದಕ್ಕೆ ಈಗಾಗಲೇ ರಾಜ್ಯದ ಹೆಚ್ಚಿನ ಹಳ್ಳಿಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ನಿಜವಾದರೂ, ಇದನ್ನು ಕಾನೂನಿನ ಬಲ ಪ್ರಯೋಗಿಸಿ, ಹೆದರಿಸಿ ಹತ್ತಿಕ್ಕುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ

ಶೀರ್ಷಿಕೆಯನ್ನಿಡುವ ಸುಖವೇ ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆ ಕೊಡುವುದಿಲ್ಲ!

’ಶೀರ್ಷಿಕೆ’ಯನ್ನೇನೋ ಸುಲಭವಾಗಿ ಹುಡುಕಬಹುದು. ಹುಡುಕಿ ಹೀಗೆ ಕೈಗೆ ಸಿಕ್ಕ ಶೀರ್ಷಿಕೆಗೆ ತಕ್ಕಂತಹ ಒಂದು ಕಥೆಯನ್ನೋ, ಲೇಖನವನ್ನೋ ಬರೆದು ಅದಕ್ಕೊಂದು ಕೊನೆ ಕಾಣಿಸುವುದಿದೆಯಲ್ಲ ಅದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಶೀರ್ಷಿಕೆ ಎನ್ನುವುದು ಕೇವಲ ಒಂದು ಸಾಲಿನೊಳಗೆ ಮುಗಿದು ಹೋಗುವಂತಹದ್ದು. ಆ ಕ್ಷಣಕ್ಕೆ ಯೋಚಿಸಿ, ಹೊಳೆದು ಒಂದೆಡೆ ಬರೆದಿಡುವಂತಹದ್ದು. ಅದೇ ಈ ಶೀರ್ಷಿಕೆಗೆ ತಕ್ಕನಾದ, ಇಡೀ ಬರಹದ ಒಳಗುಟ್ಟನ್ನು ತನ್ನೊಳಗೆ ಅಡಗಿಸಿಟ್ಟುಕೊಳ್ಳಬಹುದಾದ ಒಂದು ಬರಹವನ್ನು ಬರೆದು ಮುಗಿಸುವುದು, ಆ ಬರಹವನ್ನು ಓದಿ ಮೆಚ್ಚುವ ಓದುಗರನ್ನು ತೃಪ್ತಿ ಪಡಿಸುವುದು ಅಷ್ಟು ಸುಲಭದ ಸಂಗತಿಯೇನೂ ಅಲ್ಲ. ಯಾಕೆಂದರೆ ಶೀರ್ಷಿಕೆ ಸಿಕ್ಕಷ್ಟು ಸುಲಭದಲ್ಲಿ ಅದು ಒಳಗೊಳ್ಳಬಹುದಾದ ನೂರಾರು, ಸಾವಿರಾರು ಸಾಲುಗಳು ನಮಗೆ ಸಿಕ್ಕುವುದಿಲ್ಲ. ಸಿಕ್ಕರೂ ಮುಂದುವರಿಯುವುದಿಲ್ಲ, ಮುಂದುವರಿದರೂ ಅದು ಅಂತ್ಯವೆನ್ನುವುದನ್ನು ಕಾಣುವುದಿಲ್ಲ. ಈ ಕಾರಣದಿಂದಲೇ ನಾವು ಬರೆಯಬೇಕೆಂದುಕೊಂಡ ಅದೆಷ್ಟೋ ಕಥೆ, ಲೇಖನ, ಪ್ರಬಂಧ ಇತ್ಯಾದಿಗಳು ಕೇವಲ ಶೀರ್ಷಿಕೆಗಳಾಗಿಯೇ ನಾವು ಮಾಡಿಕೊಳ್ಳುವ ನೋಟ್‌ಗಳ ಪುಸ್ತಕದಲ್ಲೋ, ಮೊಬೈಲಿನ ಮೆಮೋರಿಯಲ್ಲೋ ಉಳಿದು ಬಿಡುತ್ತವೆ! ನಮ್ಮಲ್ಲಿ ತುಂಬಾ ಜನರಿರುತ್ತಾರೆ. ಅವರಿಗೊಂದು ಬ್ಯುಸಿನೆಸ್‌ ಸೇರಿದಂತೆ ಬದುಕನ್ನು ಸೆಟಲ್ ಮಾಡಿಕೊಳ್ಳುವ ಹೊಸ ಕೆಲಸವೊಂದನ್ನು ಮಾಡುವ ಕನಸಿರುತ್ತದೆ. ನಿಜಕ್ಕೂ ಅದು ಒಳ್ಳೆಯ ಕನಸ್ಸೇ. ಆ ಕನಸಿಗೊಂದು ಹೆಸರು ಇಡಬೇಕಲ್

ಇವರು ಕಾರಣವೇ ಇಲ್ಲದೆ ಕಣ್ಮರೆಯಾಗುವವರು...

ಈ ಸಂಬಂಧಗಳು ಸಾಯುತ್ತವೆ!! ಮೊದ ಮೊದಲಿಗೆ ಅದೆಂತಹ ಉತ್ಸಾಹ, ಅದೆಷ್ಟು ಕಾಳಜಿ- ಅಟ್ಯಾಚ್‌ಮೆಂಟು!? ಪ್ರತೀ ಕ್ಷಣವೂ ಅವರದ್ದೇ ನೆನಪು. ದಿನಾ ಬೆಳಿಗ್ಗೆ-ರಾತ್ರಿ ತಪ್ಪದ ಫೋನು, ಐದು ನಿಮಿಷಕ್ಕೆ ಇಪ್ಪತ್ತು ಮೆಸೇಜು, ಮಾತಾದಾಗಲೆಲ್ಲ ಈ ನಮ್ಮ ಸ್ನೇಹ-ಪ್ರೀತಿ- ಸಹೋದರತ್ವದ ಸಂಬಂಧ ಕೊನೇ ಉಸಿರಿರುವ ತನಕ ಎಂಬಂತಹ ಪ್ರಾಮಿಸ್ಸುಗಳು, ಕ್ಯಾಲೆಂಡರ‍್ರಿನಲ್ಲೂ ಕಾಣಿಸದ ಚಿಕ್ಕಪುಟ್ಟ ಹಬ್ಬಗಳಿಗೂ ಬಂದು ಕೈ ಸೇರುವ ಗ್ರೀಟಿಂಗ್ಸು-ಗಿಫ್ಟು, ವಾರವಾರವೂ ತಪ್ಪದ ಒಂದೆರಡು ಪತ್ರ, ಬರ್ತ್‌ಡೇಯ ರಾತ್ರಿ ಹನ್ನೆರಡು ಗಂಟೆ ಒಂದು ನಿಮಿಷಕ್ಕೆ ಸರಿಯಾಗಿ ಫೋನಿನಲ್ಲಿ ಕೇಳಿಸುವ ಮೊದಲ ವಿಶ್, ಕ್ಷಣಕ್ಷಣಕ್ಕೂ ನೋಯಬೇಡ-ಅಳಬೇಡ ಎನ್ನುವ ಭಯಂಕರ ಕಾಳಜಿ, ಏನೇ ಆದರೂ ಜೊತೆಗೆ ನಾನಿದ್ದೇ ಇದ್ದೇನೆ ಎಂಬ ತುಂಬು ಭರವಸೆ... ಬದುಕು ಫುಲ್ ಖುಷ್ ಅಲ್ಲವಾ? ಖಂಡಿತಾ. ಇಂತಹದ್ದೊಂದು ಜೀವ ಬದುಕಿಗೆ ಹೀಗೆ ಜೊತೆಯಾಗಿದ್ದಕ್ಕೇ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ. ಮಾತಿಗೆ ನಿಲುಕದ ಖುಷಿ, ತೃಪ್ತಿ, ಕನಸುಗಳಲ್ಲಿ ಮನಸ್ಸು ಹಗುರಗುರಾಗಿ ಆಕಾಶದ ನೀಲಿಯಲ್ಲಿ ಗರಿಬಿಚ್ಚಿ ಪಟಪಟಿಸುತ್ತಿರುತ್ತದೆ. ಅದ್ಯಾರು, ಯಾವಾಗ ಈ ಬಲೂನಿಗೆ ಸೂಜಿ ಚುಚ್ಚಿದರೋ!? ಚಿಕ್ಕದೊಂದು ಸದ್ದೂ ಇಲ್ಲದೇ, ಪ್ರೀತಿಯ ಸಂಬಂಧದ ಬಲೂನೊಂದು ಒಡೆದು ಹೋಗುತ್ತದೆ. ಏನೆಂದರೆ ಏನೂ ಇರಲೇ ಇಲ್ಲವೆಂಬಂತೆ ಸಂಬಂಧವೊಂದು ಸತ್ತು ಸಮಾಧಿ ಸೇರಿ ಬಿಡುತ್ತದೆ. ಖುಷಿಯಲ್ಲಿ ತೇಲುತ್ತಿದ್ದ ಮನಸ್ಸು ಆದದ್ದು ಏನೆಂದು ಅರ್ಥ ಮ