ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಲಗಿದ ಊರು

ರಾತ್ರಿ ಹೊದ್ದು ಮಲಗಿದ ಊರು ಬೆಳಿಗ್ಗೆ ಏಳಲೇ ಇಲ್ಲ... ಹಾಲಿನ ವ್ಯಾನು ಹಾರನ್ ಮಾಡಲಿಲ್ಲ ಖಾಲಿಯಾದ ತೊಟ್ಟೆಗಳು ತಾರಾಡಲಿಲ್ಲ ಬಯಲು ಹೊಲಸಾಗಲಿಲ್ಲ ಸರ್ಕಲ್ ಸೀನಣ್ಣ ಅಂಗಡಿ ಬಾಗಿಲು ತೆಗೆಯಲೇ ಇಲ್ಲ ಅಂಗಡಿ ಕಟ್ಟೆಯಲ್ಲಿ ಜನರಿಲ್ಲ. ಹೊಗೆ ತುಂಬಿಕೊಳ್ಳಲಿಲ್ಲ ಲಟಾರಿ ಮೋಹಿನಿ ಬಸ್ಸೂ ಬರಲಿಲ್ಲ ಬಸ್ಸಿನ ಕಿಟಕಿಯಿಂದ ಯಾರೂ ಎಲೆಯಡಿಕೆ ತುಪ್ಪಲಿಲ್ಲ ಗುಟ್ಕಾ ಪ್ಯಾಕೇಟುಗಳ ಅಸಹ್ಯವಿರಲಿಲ್ಲ ಕಟ್ಟಡ ಕಟ್ಟುವವರೂ ಬರಲಿಲ್ಲ ಕೆಡವುವವರೂ ಇರಲಿಲ್ಲ ಊರ ತ್ಯಾಜ್ಯ ಇನ್ಯಾರಿಗೋ ಶಾಪವಾಗಲೂ ಇಲ್ಲ ಇದು ನನ್ನದೆನ್ನುವ ಹೊಡೆದಾಟವಿಲ್ಲ ಪೊಲೀಸ್ ಲಾಠಿಗಳ ಲಟಲಟವಿಲ್ಲ ಕೋರ್ಟಿನ ಕೂಗುಗಳಿಲ್ಲ ಗುಡಿಯ ಗಂಟೆ ಕೇಳಲಿಲ್ಲ. ಮಸೀದಿ ಚರ್ಚುಗಳಿಂದಲೂ ಸದ್ದಿಲ್ಲ ಯಾರೋ ಓಡಿದರು ಇನ್ಯಾರೋ ನನ್ನದೆಂದರು ಮತ್ಯಾರೋ ನುಗ್ಗಿ ನೆಗೆದರು ಉಹ್ಞೂಂ, ಊರಲ್ಲಿ ಊರೇ ಇಲ್ಲ ಕಾಣಿಸಿದಷ್ಟು ದೂರ ಬಯಲು ಕಣ್ಣು ನೋಡಿದಲ್ಲೆಲ್ಲ ಸ್ಮಶಾನ ಇತಿಹಾಸದ ಪುಟಗಳೇ ಕಣ್ಣೆದುರು ಬಂದಂತೆ ಎಲ್ಲವೂ ಕಪ್ಪು ಮೌನ ರಾತ್ರಿ ಮಲಗಿದ ಊರಿನ ನಿದ್ದೆ ಮುಗಿಯಲೇ ಇಲ್ಲ ಬಹುಶಃ ಮುಗಿಯುವುದೂ ಇಲ್ಲ ಎನ್ನುವಾಗಲೇ... ‘ಇಲ್ಲ ನಾನು ಬದುಕಿದ್ದೇನೆ, ಅಯ್ಯೋ! ನನ್ನ ಮನೆ ಕುಸಿದು ಬಿದ್ದಿದ್ದು ಹೇಗೆ? ನನ್ನ ಹೆಂಡತಿ ಮಕ್ಕಳೆಲ್ಲ ಎಲ್ಲಿ ಹೋದರು? ಏನಾದರು??’ ಎಂದು ಚೀರುತ್ತಾ ಒಂಟಿ ಕಾಲಿನ ಮನುಷ್ಯ ಎದ್ದು ನಿಂತ. ಊರು ಮತ್ತೆಂದೂ ಮಲಗಲೇ ಇಲ್ಲ. - ಆರುಡೋ ಗಣೇಶ

ಶಾಲೆಯ ಗುಟ್ಟನ್ನು ಮಕ್ಕಳು ಮನೆಯಲ್ಲಿ ಹೇಳುತ್ತಾರಾ?

ಇಮೇಜ್
‘ಶಾ ಲೆಯಲ್ಲಿ ಇವತ್ತು ಏನೇನಾಯ್ತು? ಏನು ಹೇಳಿಕೊಟ್ಟರು?!’ ಸ್ಕೂಲ್ ವ್ಯಾನಿನಿಂದ ಮಗುವನ್ನು ಇಳಿಸಿಕೊಂಡು ಮನೆಗೆ ನಡೆದುಕೊಂಡು ಬರುವ ದಾರಿಯಲ್ಲೇ ಅಮ್ಮ ತನ್ನ ಮಗುವನ್ನು ವಿಚಾರಿಸಲಾರಂಭಿಸುತ್ತಾಳೆ. ವ್ಯಾನಿಳಿಯುತ್ತಿದ್ದಂತೆ ಅಮ್ಮ ತನಗೆ ಏನು ಕೇಳಬಹುದು ಎಂದು ಮೊದಲೇ ಯೋಚಿಸಿಕೊಂಡಿರುವ ಮಗು, ಅದಕ್ಕೆ ಏನು ಉತ್ತರ ಕೊಡಬೇಕು ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿರುತ್ತದೆ. ಮತ್ತು ತಾನು ಅಮ್ಮನಿಗೆ ಏನೆಲ್ಲವನ್ನೂ ‘ಫಿಲ್ಟರ್’ ಮಾಡಿ ಹೇಳಬೇಕಿರುತ್ತದೆಯೋ ಅದಷ್ಟನ್ನೇ ಹೇಳಿ ಸುಮ್ಮನಾಗಿ ಬಿಡುತ್ತದೆ. ಮಗು ಸ್ಕೂಲಿನಲ್ಲಿ ಇವತ್ತು ನಡೆದಿದ್ದನ್ನೆಲ್ಲ ಹೇಳಿಕೊಂಡು ಹಗುರಾಯಿತು ಎಂದು ಅಮ್ಮ ಖುಷಿಯಾಗುತ್ತಾಳೆ. ಆದರೆ ಮಗು? ಉಹ್ಞೂಂ, ಅದು ಖುಷಿಯಾಗಿರುವುದಿಲ್ಲ. ಯಾಕೆಂದರೆ ಅದು ತನ್ನ ಅಪ್ಪ ಅಮ್ಮನ ಬಳಿ ಹೇಳಲಾಗದ ಸ್ಕೂಲಿನ ಕೆಲವೊಂದು ಗುಟ್ಟುಗಳನ್ನು ತನ್ನೊಳಗೇ ಬಚ್ಚಿಟ್ಟುಕೊಂಡಿರುತ್ತದೆ. ಮತ್ತು ಆ ಗುಟ್ಟಿನ ಕಾರಣವಾಗಿಯೇ ಮಗು ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತದೆ. ಒಳಗಿಂದೊಳಗೇ ಕೀಳರಿಮೆ ಬೆಳೆಸಿಕೊಳ್ಳುತ್ತದೆ. ಯಾಕೆ ಹೀಗೆ? ತನ್ನ ಅಪ್ಪ ಅಮ್ಮನ ಹತ್ತಿರವೂ ಹೇಳಿಕೊಳ್ಳಲಾಗದ ಸ್ಕೂಲಿನಲ್ಲಿ ನಡೆದ ಯಾವುದೋ ಘಟನೆಯನ್ನು ಮಗುವೇಕೆ ಗುಟ್ಟು ಗುಟ್ಟು ಮಾಡುತ್ತಾ ಹೋಗುತ್ತದೆ? ಎಲ್ಲವನ್ನೂ ಹಂಚಿಕೊಂಡಂತೆ ನಟಿಸುವ ಮಗು, ಇದನ್ನು ತನ್ನ ಅಪ್ಪ ಅಮ್ಮ ಸೇರಿದಂತೆ ಮನೆಯ ಯಾರ ಹತ್ತಿರವೂ ಹೇಳಿಕೊಳ್ಳಲೇಬಾರದು ಎಂದು ನಿರ್ಧರಿಸುವುದಾದರೂ ಹೇಗೆ? ಈ ಪ

ಕಾಂಟ್ಯಾಕ್ಟುಗಳ ಗೀಳಿಗೆ ಬಿದ್ದ ಮನಸ್ಸುಗಳಿಗೆ ಕೊನೆ ಎಲ್ಲಿ?

ಮೊ ನ್ನೆ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಭರ್ಜರಿಯಾಗಿಯೇ ನಡೆಯಿತು. ಮದುವೆಯ ಆಹ್ವಾನ ಪತ್ರಿಕೆಯಿಂದ ಆರಂಭಿಸಿ ಮದುವೆಯ ವಿಡಿಯೋ ಮತ್ತು ಫೋಟೋಗಳನ್ನು ನೋಡುತ್ತಿದ್ದರೆ, ’ಇದ್ದರೆ ಈ ಲೆವೆಲ್ಲಿನ ಕಾಂಟ್ಯಾಕ್ಟ್ ಇರಬೇಕಿತ್ತು... ಒಂದೊಳ್ಳೆ ಮದುವೇನಾ ಅಟೆಂಡ್ ಮಾಡಿದ ಹಾಗಾಗುತ್ತಿತ್ತು’ ಎಂದು ಮನಸ್ಸಿನೊಳಗೋ ಅಥವಾ ತೀರಾ ನಿಮ್ಮದೇ ಮನಸ್ಥಿತಿಯ ಸ್ನೇಹಿತರ ವಲಯದಲ್ಲಿಯೋ ಹೇಳಿಕೊಂಡಿರುವುದಿಲ್ಲವಾ? ಮುಖೇಶ್ ಅಂಬಾನಿಯಂತಹವರ ಕಾಂಟ್ಯಾಕ್ಟ್ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈ ಬಗ್ಗೆಯೇ ಸಾಕಷ್ಟು ಹೊತ್ತು ಚರ್ಚಿಸಿರುವುದಿಲ್ಲವಾ? ಚಿಂತಿಸಿರುವುದಿಲ್ಲವಾ? ಕಾಂಟ್ಯಾಕ್ಟುಗಳು ಮತ್ತು ಇನ್ ಫ್ಲುಯೆನ್ಸುಗಳನ್ನೇ ತಮ್ಮ ಬದುಕಿನ ವೃತ್ತಿ ಮತ್ತು ಪ್ರವೃತ್ತಿ ಮಾಡಿಕೊಂಡವರು ಹಾಗೂ ಇದನ್ನೇ ತಮ್ಮ ಜೀವನದ ಶೋಕಿ ಮಾಡಿಕೊಂಡವರು ಖಂಡಿತ ಅಂಬಾನಿ ಮಗಳ ಮದುವೆಯನ್ನು ತುಂಬಾ ಮಿಸ್ ಮಾಡಿಕೊಂಡಿರುತ್ತಾರೆ! ಹಾಗಿದ್ದರೆ ಇವರಿಗೆ ಮುಖೇಶ್ ಅಂಬಾನಿ ಕಾಂಟ್ಯಾಕ್ಟಿದ್ದು, ಇಶಾ ಮದುವೆಗೂ ಹೋಗಿ ಸೆಲ್ಫಿ ಅಂತೆಲ್ಲ ತೆಗೆದುಕೊಂಡು, ಅದನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಂಚಿ, ಇಶಾಳ ಅಪ್ಪ ಅಮ್ಮ ಮತ್ತು ಸಂಬಂಧಿಕರಿಗಿಂತಲೂ ಹೆಚ್ಚಾಗಿ ಮದುವೆಗೆ ಪ್ರಿಪೇರ‍್ರಾಗಿ, ಮದುವೆ ಇದ್ದಷ್ಟೂ ದಿನವೂ ಎಂಜಾಯ್ ಮಾಡಿದ ಇವರ ಕಾಂಟ್ಯಾಕ್ಟು ಅಥವಾ ಇನ್ ಫ್ಲುಯೆನ್ಸ್ಡ್ ವ್ಯಕ್ತಿಗಳೊಂದಿಗಿನ ಆತ್ಮೀಯ ಒಡನಾಟದ ಕೊಂಡಿ ಇಲ್ಲಿಗೇ ಕೊನೆಯಾಗಿ ಬಿಡುತ್ತಿತ್ತಾ?!

ಅಂತಹವರ ನಡುವೆ ಇಂತಹವರೂ ಇರುತ್ತಾರೆ...

ಇಮೇಜ್
ಬಾಲ್ಯದಿಂದಲೂ ನೋಡಿ ಪ್ರೀತಿಸಿಕೊಂಡ ಕೋಡೂರಿನ ತಮ್ಮನಂತಹ ಹುಡುಗನೊಂದಿಗೆ ಆ ಹುಡುಗ ಅವತ್ತು ಮಲ್ಲೇಶ್ವರದ ನಮ್ಮ ಪುಸ್ತಕದ ಗೋಡೌನೇ ಆಗಿರುವ, ಆದರೆ ನಾವು 'ಆಫೀಸ್' ಎಂದು ಕರೆಯುವ ಜಾಗಕ್ಕೆ ಬಂದಿದ್ದ. ನಾನೂ ಕಿರುಚಿತ್ರ ನಿರ್ಮಿಸಬೇಕೆಂದುಕೊಂಡು ಯೋಚಿಸುತ್ತಿದ್ದಿದ್ದನ್ನು ತಿಳಿದುಕೊಂಡ ಕೋಡೂರಿನ ತಮ್ಮ, ಸಿನಿಮಾಟೋಗ್ರಾಫಿಯಲ್ಲಿ ಆಸಕ್ತಿ ಇದ್ದ ತನ್ನ ಸ್ನೇಹಿತನನ್ನು ನನಗೆ ಪರಿಚಯಿಸಲೆಂದು ಕರೆದುಕೊಂಡು ಬಂದಿದ್ದ ಮತ್ತು ಆ ಹುಡುಗನಿಗೆ ಸಿನಿಮಾ ಕ್ಷೇತ್ರದಲ್ಲಿ ಇರುವ ಆಸಕ್ತಿಯ ಬಗ್ಗೆಯೆಲ್ಲ ಹೇಳಿ, ’ಗಣೇಶಣ್ಣ, ಇವ್ನು ಮತ್ತು ಇವನ ಫ್ರೆಂಡು ಶಿವಮೊಗ್ಗದಲ್ಲಿ ಒಂದು ಸಣ್ಣ ಸಿನಿಮಾದಂತಹದ್ದನ್ನು ಮಾಡಬೇಕೆಂದು ಓಡಾಡುತ್ತಿದ್ದಾರೆ. ನೀವೇನಾದರೂ ಅದನ್ನು ಪ್ರೊಡ್ಯೂಸ್ ಮಾಡಬಹುದಾ?’ ಎಂದು ಕೇಳಿದ. ಆನಂತರ ನಾನು ಆ ಹುಡುಗನೊಂದಿಗೆ ಮಾತನಾಡಿದೆ. ಆ ಹೊತ್ತಿಗಾಗಲೇ ಕೆನಾನ್ 7D ಕ್ಯಾಮರಾವನ್ನು ಸ್ವಂತಕ್ಕೆ ಹೊಂದಿದ್ದ ಮತ್ತು ಬೆಂಗಳೂರಿನ ಯಾವುದೋ ಸಿನಿಮಾ ಇನ್ಸ್ಟಿಟ್ಯೂಟಿನಲ್ಲಿ ಸಿನಿಮಾಟೋಗ್ರಾಫಿ ಓದುತ್ತಿದ್ದ ಆ ಹುಡುಗ ’ನಾವು ಮಾಡುತ್ತಿರುವ ಕಿರುಚಿತ್ರವೂ ಅಲ್ಲದ, ಸಿನಿಮಾವೂ ಅಲ್ಲದ ಆ ಪ್ರಾಜೆಕ್ಟಿಗೆ ಹತ್ತತ್ತಿರ ಒಂದು ಲಕ್ಷದ ಬಜೆಟ್ ಬೇಕಾಗುತ್ತದೆ’ ಎಂದೆಲ್ಲ ವಿವರಿಸಿದ. ಬೇರೆಯವರು ಹಣ ಹಾಕುತ್ತಾರೆಂದರೆ ಎಲ್ಲವನ್ನೂ ಹೈ ಬಜೆಟ್ಟಿನಲ್ಲೇ ಯೋಚಿಸುವ ಇಂತಹ ಸಾಕಷ್ಟು ಹುಡುಗರೊಂದಿಗೆ ಮಾತನಾಡಿದ ಅನುಭವವಿದ್ದ ನಾನು, ’ನಾನು ಅಷ್ಟೆಲ್ಲ ಹಣ ಹಾಕು

ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು ಅನ್ನಿಸಿದ ಕ್ಷಣಗಳು!

‘ನಾನು ನನ್ನ ಬದುಕಿಗೆ ಅಂತಹ ಆಣೆ ಪ್ರಮಾಣಗಳನ್ನೇನೂ ಮಾಡಿರಲಿಲ್ಲ, ನಿನ್ನನ್ನು ಬಿಟ್ಟು ಜೀವಿಸುವ ಆಸೆಯೇ ನನಗಿರಲಿಲ್ಲ. ನಿನಗೋಸ್ಕರ ನಾನು ಬೆಳದಿಂಗಳನ್ನು ರಾತ್ರಿಯಿಡೀ ಹೊಳೆಯುವಂತೆ ಕೇಳಿಕೊಂಡೆ, ಹಾಗೆಯೇ ಹೂಗಳ ಮೇಲೆ ಸುಗಂಧವನ್ನು ಸಿಂಪಡಿಸಿದೆ. ನನ್ನ ಕನಸುಗಳನ್ನು ಹಿಡಿದಿಟ್ಟುಕೊಂಡಿದ್ದ ದಾರವೊಂದು ಯಾವಾಗ ತುಂಡಾಯಿತೋ ಗೊತ್ತೇ ಆಗಲಿಲ್ಲ, ನನ್ನ ಈ ಸುಂದರ ಕನಸಿನಿಂದ ನಾನೊಂದು ದಿನ ಎಚ್ಚೆತ್ತುಕೊಳ್ಳಬೇಕಾಗಬಹುದೆಂದು ಊಹಿಸಿಯೇ ಇರಲಿಲ್ಲ. ಪ್ರತಿ ಸಂಜೆಯೂ ನಾನು ಮನೆಯನ್ನು ಅಲಂಕರಿಸುತ್ತಿದ್ದೆ ಹಾಗೂ ನೀನೂ ಬರಬಹುದೆನ್ನುವ ಬಹುದೊಡ್ಡ ನಿರೀಕ್ಷೆಯೊಂದಿಗೇ ಬೇರೆ ಅತಿಥಿಗಳನ್ನೂ ಆಹ್ವಾನಿಸುತ್ತಿದ್ದೆ. ನೀನು ನನ್ನ ಹೊಸ್ತಿಲವರೆಗೆ ಬಂದು ಹಾಗೆಯೇ ಮರಳಿದೆ, ಇಂತಹ ಅತಿಥಿಯೊಬ್ಬರು ಬರಬಹುದೆನ್ನುವ ನಿರೀಕ್ಷೆಯನ್ನು ನಾನ್ಯಾವತ್ತೂ ಮಾಡಿರಲಿಲ್ಲ.’ ‘ಐಸಾ ಕೋಯಿ ಜಿಂದಗಿ ಸೇ ವಾದಾ ತೋ ನಹೀ ತಾ...’ ಎನ್ನುವ ಗುಲ್ಜಾರ್ ಬರೆದ ಹಾಡನ್ನು ಕನ್ನಡದಲ್ಲಿ ಬರೆದರೆ ಹತ್ತತ್ತಿರ ಇದೇ ಅರ್ಥ ಬರಬಹುದೇನೋ. ಯಾಕೆ ಹೀಗೆ ಹೇಳಿದೆ ಎಂದರೆ, ನನಗೆ ಕನ್ನಡವೊಂದನ್ನು ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುವುದಿಲ್ಲ. ನಿಜ ಹೇಳಬೇಕೆಂದರೆ ಗುಲ್ಜಾರ್ ಈ ಹಾಡು ಬರೆದ ಹಿಂದಿಯೂ ಕೂಡಾ ಈವರೆಗೆ ನನಗೆ ಪೂರ್ತಿಗೆ ಪೂರ್ತಿ ಅರ್ಥವಾಗಿಲ್ಲ. ಆದರೂ ಗುಲ್ಜಾರ್ ಬರೆದು ರೂಪ್‌ಕುಮಾರ್ ರಾಥೋಡ್ ಹಾಡಿದ ಈ ಹಾಡು ನನ್ನನ್ನು ಕ್ಯಾಸೆಟ್ಟುಗಳ ಕಾಲದಲ್ಲಿ ಅದೆಷ್ಟು ಕಾಡಿ ಬಿಟ್ಟಿತ್ತ

ನಮ್ಮ ಮಾತುಗಳಲ್ಲಿ ಬದುಕಿನ ಭೂತದ ನೆರಳಿರುತ್ತದೆ!

ಆ ಆಟೋ ಡ್ರೈವರ ಅಸಹನೆಗೆ ಕಾರಣವೇನು ಎನ್ನುವುದು ನನಗೆ ಮನೆಯ ಹತ್ತಿರ ಇಳಿಯುವ ತನಕ ಗೊತ್ತಾಗಿರಲಿಲ್ಲ. ನಾನು ಎಲ್ಲಿಯೇ ಹೋದರೂ ಆಟೋದಲ್ಲಿಯೇ ಹೋಗುತ್ತೇನೆ. ಮತ್ತು ನನ್ನ ಇಷ್ಟು ವರ್ಷಗಳ ಪ್ರಯಾಣಕ್ಕೆ ಜೊತೆಯಾದ ಆಟೋ ಡ್ರೈವರ‍್ರುಗಳಲ್ಲಿ ನೂರಕ್ಕೆ ಎಂಭತ್ತರಷ್ಟು ಡ್ರೈವರ‍್ರುಗಳೊಂದಿಗೆ ನಾನು ದಾರಿಯುದ್ದಕ್ಕೂ ಮಾತನಾಡಿಕೊಂಡು, ಅವರ ಬದುಕಿನ ಕಷ್ಟ ಸುಖಗಳನ್ನು ಅರಿಯುವ ಪ್ರಯತ್ನವನ್ನು ಮಾಡಿದ್ದೇನೆ. ಆದರೆ ಮೊನ್ನೆ ರಾಜಾಜಿನಗರದ ಮರಿಯಪ್ಪನ ಪಾಳ್ಯದಿಂದ ಮಲ್ಲೇಶ್ವರಕ್ಕೆ ಹೊರಟ ಆಟೋದ ಡ್ರೈವರ ಬೋವಿಪಾಳ್ಯದ ಶ್ರೀನಿವಾಸ್ ಅವರ ಜೊತೆ ಬದುಕಿನ ಮಾತುಗಳು ಸಾಧ್ಯವಾಗಲಿಲ್ಲ. ಯಾಕೆ? ಅದು ನನಗೂ ತಕ್ಷಣಕ್ಕೆ ಗೊತ್ತಾಗಲಿಲ್ಲ. ಆಟೋ ಹತ್ತಿದಾಗಿನಿಂದ ಸಿಡುಕುತ್ತಿದ್ದ ಶ್ರೀನಿವಾಸ್ ಅವರು, ನಾನು ಆಟೋದಲ್ಲಿ ಯಾವಾಗಲೂ ಕೂರುವಂತೆ ಸೀಟಿನ ಎಡಭಾಗಕ್ಕೆ ಒರಗಿ ಕೂತಿದ್ದಕ್ಕೂ ಕಿರಿಕಿರಿ ಮಾಡಿದರು. ಅಲ್ಲಿಯತನಕ ಸುಮ್ಮನಿದ್ದ ನಾನು, ಆನಂತರ ಅವರಿಗೆ ಕೊಡಬೇಕಾದ ರೀತಿಯಲ್ಲೇ ಉತ್ತರ ಕೊಟ್ಟೆ ಮತ್ತು ಮನೆ ಹತ್ತಿರ ಇಳಿಯುವ ಹೊತ್ತಿಗೆ ಇವರಿಗೆ ತಮ್ಮ ಆಟೋದಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರು ಶ್ರೀಮಂತರು, ಬಡವರ ಕಷ್ಟ ಅರಿಯದವರು ಎನ್ನುವ ಪೂರ್ವಾಗ್ರಹಪೀಡಿತ ಭಾವವೊಂದು ಇರುವುದು ನನ್ನ ಗಮನಕ್ಕೆ ಬಂದಿತ್ತು. ಕಥೆ ಇಷ್ಟೇ. ಈ ಶ್ರೀನಿವಾಸ್ ಅವರು ಕೆಲವೇ ವರ್ಷಗಳ ಹಿಂದೆ ಆರೇಳು ಆಟೋಗಳ ಮಾಲೀಕರಾಗಿದ್ದರಂತೆ. ಆದರೆ ಈಗ ನಷ್ಟವಾಗಿ ಅವರು ಓಡಿಸುತ್ತಿದ್ದ ಆಟೋವೊಂದು ಮ

ಕೊನೆಗೊಂದು ದಿನ ಫ್ಲೆಕ್ಸಿನ ಚಿತ್ರವಾಗಿಯೋ, ಹಾರ ಹಾಕಿಸಿಕೊಂಡ ಫ್ರೇಮಿನೊಳಗಿನ ಫೋಟೋವಾಗಿಯೋ...

ಕಳೆದ ಏಳು ವರ್ಷಗಳಿಂದ ಪ್ರತೀ ಸಂಜೆ ನಾವು ಮನೆಗೆ ಬೇಕಾದ ತರಕಾರಿಯನ್ನು ಕೊಳ್ಳುತ್ತಿರುವುದು ಮಲ್ಲೇಶ್ವರ ಈಜುಕೊಳ ಬಡಾವಣೆಯ ಎರಡನೇ ಕ್ರಾಸ್ ಹತ್ತಿರದ ಪುಟ್ಟ ಸರ್ಕಲ್ಲಿನಲ್ಲಿ ತಳ್ಳುಗಾಡಿ ನಿಲ್ಲಿಸಿಕೊಂಡು ತರಕಾರಿ ಮಾರಾಟ ಮಾಡುವ ಗೋಪಾಲ ಅವರ ಹತ್ತಿರ. ಇವರೊಂದಿಗೆ ವ್ಯಾಪಾರ, ಚೌಕಾಸಿ ಎನ್ನುವುದೆಲ್ಲವನ್ನೂ ಮೀರಿದ ಆತ್ಮೀಯ ಸಂಬಂಧವೊಂದು ನನಗೂ, ರಮಾಕಾಂತಿಗೂ ಇದೆ. ಆದ್ದರಿಂದಲೇ ನಾವು ಇಷ್ಟು ವರ್ಷಗಳಲ್ಲಿ ಗೋಪಾಲ ಅವರ ಗೈರು ಹಾಜರಿಯಲ್ಲಿ ಕೆಲವೊಮ್ಮೆ ಬೇರೆ ಕಡೆ ತರಕಾರಿ ತೆಗೆದುಕೊಂಡಿದ್ದೇವೆ ಬಿಟ್ಟರೆ, ಇವರಿದ್ದಾಗ ಬೇರೆ ಕಡೆ ತರಕಾರಿ ಖರೀದಿಸಿದ ನೆನಪು ನನಗಿಲ್ಲ. ಗೋಪಾಲ ಅವರು ತರಕಾರಿ ಮಾರುವ ರಸ್ತೆಯ ಎದುರಿಗಿರುವ ಹಾಲಿನ ಬೂತ್ ಹತ್ತಿರದ ಮೂಲೆಯಲ್ಲಿ ಅದೊಂದು ದಿನ ತರಕಾರಿ ಗಾಡಿಯೊಂದಿಗೆ ಪ್ರತ್ಯಕ್ಷವಾಗಿದ್ದು ನರಸಿಂಹಯ್ಯ. ಒಂದು ಕಣ್ಣು ಸ್ವಲ್ಪ ಒರಚಾಗಿರುವ, ತೆಳ್ಳಗಿನ ಶರೀರದ, ಮಧ್ಯಮ ಎತ್ತರದ ಈ ನರಸಿಂಹಯ್ಯ ವ್ಯಾಪಾರಕ್ಕೆ ನಿಲ್ಲುತ್ತಿದ್ದಂತೆ ಮೊದಲು ಕೈ ಹಾಕಿದ್ದೇ ಗೋಪಾಲ ಅವರ ಖಾಯಂ ಗ್ರಾಹಕರಿಗೆ! ಇದರಿಂದ ನಾನೂ ಹೊರತಾಗಿರಲಿಲ್ಲ. ಅದೊಮ್ಮೆ ಗೋಪಾಲ ಅವರಿಲ್ಲದೇ ಇದ್ದಾಗ ತರಕಾರಿ ಖರೀದಿಸೋಣವೆಂದು ನರಸಿಂಹಯ್ಯನವರ ಹತ್ತಿರ ಹೋದೆ. ನಾನು ಗೋಪಾಲ ಅವರ ಹತ್ತಿರ ಪ್ರತೀದಿನ ತರಕಾರಿ ಖರೀದಿಸುವುದನ್ನು ಗಮನಿಸಿದ್ದ ನರಸಿಂಹಯ್ಯ ನಾನು ಅವರ ಹತ್ತಿರ ವ್ಯಾಪಾರಕ್ಕೆ ಹೋಗುತ್ತಿದ್ದಂತೆ, ತುಂಬಾ ಪ್ರೀತಿಯಿಂದ ಮಾತನಾಡಿಸಿದರು. ವ್ಯಾಪಾರವೆಲ್ಲ ಮ

ಪ್ರೀತಿ, ಬದುಕು ಮತ್ತು ಹದ್ದು

ಜೊತೆಯಾಗಿ ನಡೆಯಬಹುದಾಗಿದ್ದ ದಾರಿ ಇನ್ನೂ ದೂರವಿತ್ತು. ಅಷ್ಟರಲ್ಲಿ ಅವನು ಸದ್ದಿಲ್ಲದೇ ಹೊರಟು ಹೋಗಿದ್ದ. ಯಾಕೆ? ಏನಾಯಿತು? ಕೇಳೋಣವೆಂದರೆ ಅವನು ಹೀಗೆ ನಡುದಾರಿಯಲ್ಲಿ ನನ್ನನ್ನು ಒಂಟೊಂಟಿಯಾಗಿಸಿ ಬಿಟ್ಟು ಹೋಗುತ್ತಾನೆ ಎನ್ನುವ ಸಣ್ಣದೊಂದು ಸುಳಿವು ಕನಸಿನಲ್ಲಿ ಕೂಡಾ ನನ್ನನ್ನು ಕದಲಿಸಿರಲಿಲ್ಲ. ಅವತ್ತು ಅವನು ಉಸಿರಿಗೆ ಉಸಿರು ತಾಕಿಸುವಷ್ಟು ಹತ್ತಿರಕ್ಕೆ ಬಂದು ನಿಂತು, ’ನಿಮ್ಮ ಹೆಸ್ರು ನನಗೆ ಗೊತ್ತಿಲ್ಲ. ಪ್ರೀತಿಸೋಕೆ ಹೆಸರು, ದೇಹ, ವಿಳಾಸ, ಕೆಲಸ ಯಾವುದೂ ಮುಖ್ಯವಲ್ಲ, ಮನಸ್ಸಷ್ಟೇ. ಆ ಮನಸ್ಸನ್ನೇ ಇಷ್ಟು ಪಟ್ಟು ನಾನು ನಿಮ್ಮನ್ನು, ಪ್ರೀತಿ ಅನ್ನೋದನ್ನು ಈ ಬದುಕು ಬದ್ಕೋಕೆ ಶುರು ಮಾಡಿದ ಕ್ಷಣದಿಂದ ಪ್ರೀತಿಸಿಕೊಂಡೇ ಬಂದಿದ್ದೇನೆ... ನನಗೆ ನಿಮ್ಮ ಪ್ರೀತಿ ಸಿಗಬಹುದಾ?’ ಎಂದು ಕೇಳಿದವನನ್ನು ನನ್ನ ಕಣ್ಣುಗಳೂ ಸರಿಯಾಗಿ ನೋಡಿರಲಿಲ್ಲ. ಆದರೆ ಮನಸ್ಸು ಹೂಂಗುಟ್ಟಿ ಬಿಟ್ಟಿತ್ತು. ಹೀಗೆ ಆರಂಭವಾದ ಪ್ರೀತಿ ಈ ಬದುಕಿಗೆ ಏನೆಲ್ಲವನ್ನೂ ಕೊಟ್ಟಿತು! ಬಹುಶಃ ಅವನು ಹೀಗೆ ಹತ್ತಿರ ಬಂದು ನನ್ನ ಮೇಲಿನ ತನ್ನ ಪ್ರೀತಿಯನ್ನು ಹೇಳಿಕೊಳ್ಳದೇ ಹೋಗಿದ್ದರೆ ಈ ಬದುಕನ್ನೇ ನಾನೆಲ್ಲೋ ಕಳೆದುಕೊಂಡು ಬಿಡುತ್ತಿದ್ದೆನೇನೋ ಎನ್ನುವಂತಹ ಸಾರ್ಥಕತೆಯನ್ನು ಅವನು ನನಗೆ ಕೊಟ್ಟಿದ್ದ. ಬರೀ ಪ್ರೀತಿಯನ್ನಷ್ಟೇ ನೆಚ್ಚಿಕೊಂಡು ಬದುಕಿನ ದಾರಿಯಲ್ಲಿ ಕೈ ಕೈ ಹಿಡಿದು ನಡೆದ ಇಷ್ಟು ದೂರದಲ್ಲಿ ಅವನೂ ನನ್ನ ಹೆಸರು ಕೇಳಲಿಲ್ಲ, ನನಗೂ ಅವನ ಹೆಸರು ಕೇಳಬೇಕೆನ್ನಿಸಿರಲಿಲ್ಲ

ಬದಲಾದ ಜಗತ್ತಿನ ಲೆಕ್ಕಾಚಾರದಲ್ಲಿ... ನಾನೂ ಈಗ ಸೆಲೆಬ್ರೆಟಿ...!?

ಯಾರ ಹತ್ತಿರವೂ ಬಾಯಿ ಬಿಟ್ಟು ಹೇಳಿಕೊಂಡಿರುವುದಿಲ್ಲವಾದರೂ, ಮನದ ಮೂಲೆಯಲ್ಲಿ ಹುಟ್ಟಿಕೊಳ್ಳುವ ಅಂತಹದ್ದೊಂದು ಆಸೆ ಆಗಾಗ ಎಲ್ಲೆಲ್ಲಿಗೋ ಕರೆದುಕೊಂಡು ಹೋಗಿ ಖುಷಿ ಕೊಡುತ್ತಿರುತ್ತದೆ. ‘ನಾನೂ ಸೆಲೆಬ್ರಿಟಿಯಾಗಿದ್ದರೆ...’ ಎನ್ನುವ ಆ ಕ್ಷಣದ ಕಲ್ಪನೆ-ಕನಸುಗಳೆಲ್ಲವೂ ನಮ್ಮನ್ನು ಅದೊಂದು ಬಗೆಯ ರೋಮಾಂಚನಕ್ಕೀಡು ಮಾಡುತ್ತಿರುತ್ತದೆ. ಈ ಕನಸು ಒಂದಿಷ್ಟು ದೂರಕ್ಕೆ ಎಳೆದೊಯ್ದು ಬಿಟ್ಟಿದ್ದೇ ಹೌದಾದರೆ, ನನ್ನ ಬದುಕಿನಲ್ಲಿ ಇದೆಲ್ಲವೂ ನಿಜವಾಗಿ ಬಿಟ್ಟಿದ್ದರೆ ಇವತ್ತಿನ ಬದುಕಿನ ಕಷ್ಟಗಳನ್ನೆಲ್ಲ ಜಾಡಿಸಿಕೊಂಡು ನೆಮ್ಮದಿಯಾಗಿದ್ದು ಬಿಡಬಹುದಿತ್ತು ಎಂದುಕೊಳ್ಳುತ್ತಾ... ಅಷ್ಟರೊಳಗೆ ವಾಸ್ತವದ ಬದುಕಿನ ಕದವನ್ನು ಅದ್ಯಾರೋ ದಢದಢ ತಟ್ಟಿ ಬಿಡುತ್ತಾರೆ. ‘ಇದೆಲ್ಲ ನನ್ನ ಲೈಫಿನಲ್ಲಿ ನನಸಾಗುವುದು ಅಷ್ಟು ಸುಲಭವಲ್ಲ. ಇದೆಲ್ಲ ನನ್ನ ಹಣೆಯಲ್ಲಿ ಬರೆದೂ ಇಲ್ಲ...’ ಎಂದು ನಿಮ್ಮಷ್ಟಕ್ಕೇ ಗೊಣಗುತ್ತಾ ಈಗಿರುವ ಬದುಕು ಇಷ್ಟವೋ, ಕಷ್ಟವೋ ಒಟ್ಟಿನಲ್ಲಿ ಬದುಕಬೇಕಿದೆ ಅಷ್ಟೇ ಎಂದುಕೊಂಡು ಮಾಡಬೇಕಾದ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತೀರಿ. ಇನ್ನೊಮ್ಮೆ ಅದ್ಯಾವುದೋ ಒಂದು ಕ್ಷಣದಲ್ಲಿ ಮತ್ತೆ ಅದೇ ಸೆಲೆಬ್ರಿಟಿಯಾಗುವ ಕನಸೊಂದು ಕೈ ಹಿಡಿದು ಕರೆಯುತ್ತದೆ. ಆ ಕ್ಷಣಕ್ಕೆ ಖುಷಿ ಕೊಡುತ್ತದೆ. ಮತ್ತೆ ವಾಸ್ತವ, ಕದ, ಅದನ್ಯಾರೋ ತಟ್ಟಿ ನಿಮ್ಮನ್ನು ಎಚ್ಚರಿಸಿ... ಅಲ್ಲಿಗೆ ನೀವು ಇವತ್ತ್ಯಾವ ಬದುಕನ್ನು ಬದುಕುತ್ತಿದ್ದೀರಲ್ಲ, ಅದಕ್ಕಷ್ಟೇ ನೀವು ಅರ್ಹರೇ ಹೊರತು ಇದರ