ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಕೊರೋನಾ ಕಂಟ್ರೋಲ್ ಆಗುತ್ತದಾ?!

ಯಡಿಯೂರಪ್ಪನವರನ್ನು ಕೆಳಗಿಳಿಸಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಯ ಹೈಕಮಾಂಡ್‌ ಮತ್ತು ರಾಜ್ಯ ಬಿಜೆಪಿಯ ಕೆಲ ಶಾಸಕರು, ಅಸಮಾಧಾನಗೊಂಡಿರುವ ಸಚಿವರು ಒಟ್ಟಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅನುಭವಿ ರಾಜಕೀಯ ವರದಿಗಾರರ ಕೆಲವು ವರದಿಗಳ ಪ್ರಕಾರವೂ ಇಂತಹದ್ದೊಂದು ಗಂಭೀರ ಪ್ರಯತ್ನ ನಡೆಯುತ್ತಿದೆಯಂತೆ! ರಾಜ್ಯದಲ್ಲಿ ಕೊರೋನಾದಿಂದಾಗಿ ಸಾವು ಈ ಪರಿ ಅಬ್ಬರಿಸುತ್ತಿರುವಾಗ ಈ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಅಷ್ಟೊಂದು ತುರ್ತಾದ ವಿಷಯವಾ?! ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ರಾಜ್ಯದಲ್ಲಿ ಕೊರೋನಾ ಆಪತ್ತನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಿಕೊಳ್ಳುವ ಮೊದಲು, ಅವರದ್ದೇ ಮಂತ್ರಿ ಮಂಡಲ ಎಷ್ಟರಮಟ್ಟಿಗೆ ಅವರೊಂದಿಗೆ ಈ ಹೋರಾಟಕ್ಕೆ ಕೈ ಜೋಡಿಸಿದೆ? ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಸಹಕಾರ ನೀಡುತ್ತಿದೆ? ಎನ್ನುವ ಪ್ರಶ್ನೆಗಳಿಗೂ ಉತ್ತರ ಹುಡುಕಿಕೊಳ್ಳುವುದು ಒಳ್ಳೆಯದು. ಹಾಗೆಂದು, ನಾನು ಯಡಿಯೂರಪ್ಪನವರನ್ನೋ, ಅವರ ಕಾರ್ಯವೈಖರಿಯನ್ನೋ ಖಂಡಿತ ಸಮರ್ಥಿಸುತ್ತಿಲ್ಲ. ಆಯಿತು, ನೀವು ಅವರನ್ನು ಬದಲಾಯಿಸಿ ಬೇರೆ ಯಾರನ್ನೋ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ ಎಂದೇ ಇಟ್ಟುಕೊಳ್ಳಿ, ಅವರು ನಿಮ್ಮದೇ ಬಿಜೆಪಿಯವರೇ ಇರುತ್ತಾರಲ್ಲವಾ? ರಾಜ್ಯ ಇಷ್ಟು ಸಂಕಷ್ಟದಲ್ಲಿರುವಾಗಲೂ ಅವರು ಬಿಜೆಪ

ಲಾಕ್‌ಡೌನ್ ಎನ್ನುತ್ತಿದ್ದಂತೆ ಸರ್ಕಾರ ಬೆಂಗಳೂರನ್ನೇಕೆ ಖಾಲಿ ಮಾಡಿಸುತ್ತದೆ?!

ಇಮೇಜ್
  ಇತಿಹಾಸದ ಪುಟಗಳನ್ನು ತೆರೆದು ನೋಡಿ. ತಮ್ಮ ರಾಜ್ಯಕ್ಕೆ ಶತ್ರು ದಾಳಿ ಸೇರಿದಂತೆ ಯಾವುದೇ ಸಂಕಷ್ಟಗಳು ಬಂದೆರಗಿದಾಗ ರಾಜನಾದವನು ರಾಜ್ಯದ ಅಷ್ಟೂ ಗಡಿಗಳನ್ನು ಭದ್ರ ಪಡಿಸಿ, ರಾಜ್ಯದಲ್ಲಿರುವ ಪ್ರಜೆಗಳು ಹೊರಗೆಲ್ಲೂ ಹೋಗದಂತೆ ಹಾಗೂ ರಾಜ್ಯದೊಳಗೆ ಹೊರಗಿನ ಯಾರೂ ಪ್ರವೇಶಿಸದಂತೆ ಪ್ರಜೆಗಳೊಂದಿಗೆ ಇಡೀ ರಾಜ್ಯವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದ. ಶತ್ರು ದಾಳಿಯಂತಹ ಸಂದರ್ಭದಲ್ಲಿಯೂ ರಾಜನಾದವನು ಅಗತ್ಯಕ್ಕೆ ಬೇಕಿರುವಷ್ಟನ್ನೆಲ್ಲ ಶೇಖರಿಸಿಕೊಂಡು ಕೋಟೆಯ ಬಾಗಿಲನ್ನು ಭದ್ರ ಪಡಿಸುತ್ತಿದ್ದ. ಅಷ್ಟರಮಟ್ಟಿಗೆ ನಮ್ಮ ಇತಿಹಾಸ ಕಂಡ ದೊರೆಗಳಾದವರಿಗೆ ದೂರದೃಷ್ಟಿ ಇರುತ್ತಿತ್ತು, ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಇರುತ್ತಿತ್ತು ಹಾಗೂ ಅದಕ್ಕಿಂತ ಹೆಚ್ಚಾಗಿ ತನ್ನ ಪ್ರಜೆಗಳನ್ನು ಸಂಕಷ್ಟದ ಸಂದರ್ಭದಲ್ಲಿ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಮಾನವೀಯ ಹೃದಯವೂ ಇರುತ್ತಿತ್ತು. ಆದ್ದರಿಂದಲೇ ಅವರನ್ನು ದೊರೆಗಳೆನ್ನುತ್ತಿದ್ದರು ಹಾಗೂ ಪ್ರಜೆಗಳಿಗೆ ತಮ್ಮ ಸಂಕಷ್ಟದಲ್ಲಿ ರಾಜ ನಮ್ಮ ಜೊತೆಗಿರುತ್ತಾನೆ ಎನ್ನುವ ನಂಬಿಕೆ ಇರುತ್ತಿತ್ತು. ಇತಿಹಾಸ ಕಂಡಿರುವ ಯಾವುದೇ ರಾಜರುಗಳು ಕೂಡಾ ಜನರ ಈ ನಂಬಿಕೆಯನ್ನು ಹುಸಿಗೊಳಿಸಿದ ಸಂದರ್ಭಗಳನ್ನು ಭೂತಗನ್ನಡಿ ಹಾಕಿಕೊಂಡು ಹುಡುಕಬೇಕೇನೋ. ಆದರೆ ಅವತ್ತಿನ ರಾಜರಿಗಿಂತ ಹೆಚ್ಚು ಐಷಾರಾಮಿ ಬದುಕನ್ನು ಬದುಕುತ್ತಿರುವ ಹಾಗೂ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದಾದ ತಂತ್ರಜ್ಞಾನಗಳೆಲ್ಲವೂ ಬೆರಳ ತುದಿಯಲ್ಲೇ ಹೊಂದಿರುವ ನಮ