ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಆಗ ನಾನು ಅರೆಕಾಲಿಕ ಸಿನಿಮಾ ಪತ್ರಕರ್ತನಾಗಿದ್ದೆ. ಆಗಾಗ ಸಿನಿಮಾದವರನ್ನು ಭೇಟಿಯಾಗುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ದರ್ಶನ್ ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಶೂಟಿಂಗಿನಲ್ಲಿದ್ದೇನೆ, ಶೂಟಿಂಗ್ ಸ್ಪಾಟಿಗೇ ಬನ್ನಿ. ಇಲ್ಲೇ ಮಾತನಾಡೋಣ ಎಂದರು. ಮಲ್ಲೇಶ್ವರ ಸಮೀಪದ ಗ್ರೌಂಡೊಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಯಾವ ಸಿನಿಮಾ ಎಂದು ನೆನಪಿಲ್ಲ. ಆ ಸಿನಿಮಾದಲ್ಲಿ ಮಾನ್ಯ ಹೀರೋಯಿನ್. ದರ್ಶನ್ ಬ್ರೇಕ್‌ನಲ್ಲಿ ನಮ್ಮ ಜೊತೆ ಮಾತನಾಡಿದರು. ಹೇಗೂ ಬರೋದು ಬಂದಿದ್ದೇವಲ್ಲ, ಸಿಕ್ಕರೆ ಮಾನ್ಯಳ ಜೊತೆಗೂ ಮಾತನಾಡಿ ಒಂದು ಲೇಖನ ಬರೆಯಬಹುದು ಎಂದುಕೊಂಡು, ದರ್ಶನ್ ಬಳಿ, ’ಸ್ವಲ್ಪ ಮಾನ್ಯಳನ್ನು ಇಂಟ್ರಡ್ಯೂಸ್ ಮಾಡಿಕೊಡ್ತೀರಾ?’ ಎಂದು ಕೇಳಿದೆವು. ಆಕೆ ಬ್ರೇಕ್‌ನಲ್ಲಿ ತನ್ನ ಕ್ಯಾರಾವಾನ್‌ನಲ್ಲಿ ರೆಸ್ಟ್ ಮಾಡುತ್ತಿದ್ದಳು. ದರ್ಶನ್ ಕೂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಆ ಕ್ಯಾರಾವಾನ್ ನಿಂತಿತ್ತು. ದರ್ಶನ್ ಆಯಿತು, ಪರಿಚಯಿಸಿಕೊಡುತ್ತೇನೆ. ಮಾತನಾಡಿ ಎಂದು ಹೇಳಬಹುದಿತ್ತು. ಅದು ಅವರಿಂದ ಆಗದೇ ಇರುವ ಕೆಲಸವೇನೂ ಆಗಿರಲಿಲ್ಲ. ಆದರೆ ದರ್ಶನ್ ಹಾಗೆ ಮಾಡಲಿಲ್ಲ. ಬದಲಿಗೆ, ’ಸಿನಿಮಾಕ್ಕೆಷ್ಟು ಬೇಕೋ ಅಷ್ಟು ಮಾತ್ರ ನಾನು ನನ್ನ ಸಹನಟಿಯರ ಜೊತೆ ಮಾತನಾಡೋದು. ಅದರಾಚೆಗೆ ನಾನು ಅವರ ಜೊತೆ ಕಾಂಟ್ಯಾಕ್ಟಿನಲ್ಲಿ ಇರೋದಿಲ್ಲ. ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳೋರು. ಊಟದ ತಟ್ಟೆ ಮುಂದೆ, ಹುಡುಗಿಯರ ಮುಂದೆ ಹೆಚ್ಚು ಹೊತ್ತು ಕೂರಬಾರದು ಅಂತ. ಅದನ್ನ...