ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ ಕೊರೋನಾ ಕಂಟ್ರೋಲ್ ಆಗುತ್ತದಾ?!
ಯಡಿಯೂರಪ್ಪನವರನ್ನು ಕೆಳಗಿಳಿಸಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಯ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿಯ ಕೆಲ ಶಾಸಕರು, ಅಸಮಾಧಾನಗೊಂಡಿರುವ ಸಚಿವರು ಒಟ್ಟಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅನುಭವಿ ರಾಜಕೀಯ ವರದಿಗಾರರ ಕೆಲವು ವರದಿಗಳ ಪ್ರಕಾರವೂ ಇಂತಹದ್ದೊಂದು ಗಂಭೀರ ಪ್ರಯತ್ನ ನಡೆಯುತ್ತಿದೆಯಂತೆ! ರಾಜ್ಯದಲ್ಲಿ ಕೊರೋನಾದಿಂದಾಗಿ ಸಾವು ಈ ಪರಿ ಅಬ್ಬರಿಸುತ್ತಿರುವಾಗ ಈ ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಅಷ್ಟೊಂದು ತುರ್ತಾದ ವಿಷಯವಾ?! ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ರಾಜ್ಯದಲ್ಲಿ ಕೊರೋನಾ ಆಪತ್ತನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಿಕೊಳ್ಳುವ ಮೊದಲು, ಅವರದ್ದೇ ಮಂತ್ರಿ ಮಂಡಲ ಎಷ್ಟರಮಟ್ಟಿಗೆ ಅವರೊಂದಿಗೆ ಈ ಹೋರಾಟಕ್ಕೆ ಕೈ ಜೋಡಿಸಿದೆ? ಕೇಂದ್ರ ಸರ್ಕಾರ ಎಷ್ಟರಮಟ್ಟಿಗೆ ಸಹಕಾರ ನೀಡುತ್ತಿದೆ? ಎನ್ನುವ ಪ್ರಶ್ನೆಗಳಿಗೂ ಉತ್ತರ ಹುಡುಕಿಕೊಳ್ಳುವುದು ಒಳ್ಳೆಯದು. ಹಾಗೆಂದು, ನಾನು ಯಡಿಯೂರಪ್ಪನವರನ್ನೋ, ಅವರ ಕಾರ್ಯವೈಖರಿಯನ್ನೋ ಖಂಡಿತ ಸಮರ್ಥಿಸುತ್ತಿಲ್ಲ. ಆಯಿತು, ನೀವು ಅವರನ್ನು ಬದಲಾಯಿಸಿ ಬೇರೆ ಯಾರನ್ನೋ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ ಎಂದೇ ಇಟ್ಟುಕೊಳ್ಳಿ, ಅವರು ನಿಮ್ಮದೇ ಬಿಜೆಪಿಯವರೇ ಇರುತ್ತಾರಲ್ಲವಾ? ರಾಜ್ಯ ಇಷ್ಟು ಸಂಕಷ್ಟದಲ್ಲಿರುವಾಗಲೂ ಅವರು ಬಿಜೆಪ...