ಪೋಸ್ಟ್‌ಗಳು

ಜುಲೈ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಕ್ಷಣದಲ್ಲಿ ಶರತ್‌ ಸಾವಿನೆದುರು ಅದೆಷ್ಟು ಅಸಹಾಯಕ!!

ಇಮೇಜ್
ಸಾವು ಸೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು. ನಿನ್ನ ಕನಸುಗಳೇನು, ನಿನ್ನ ಉದ್ದೇಶವೇನು, ಬದುಕಿನಲ್ಲಿ ನಿನ್ನ ಮುಂದಿರುವ ಜವಾಬ್ದಾರಿಗಳೇನು, ನೀನು ನನ್ನೊಂದಿಗೆ ಬಂದರೆ ನಿನ್ನನ್ನು ನಂಬಿಕೊಂಡವರಿಗೆ, ಪ್ರೀತಿಸಿಕೊಳ್ಳುತ್ತಿರುವವರಿಗೆ ಕಷ್ಟವಾಗುವುದಿಲ್ಲವಾ, ನೀನಿಲ್ಲದೇ ಅವರು ಹೇಗೆ ಬದುಕುತ್ತಾರೆ ಎನ್ನುವ ಯಾವ ಪ್ರಶ್ನೆಗಳನ್ನೂ ಸಾವು ಕೇಳುವುದಿಲ್ಲ. ಅದು ನಿನ್ನ ಕಣ್ಣೀರು, ಇದೊಂದು ಸಾರಿ ಬಿಟ್ಟು ಬಿಡು ಎಂದು ದಯನೀಯವಾಗಿ ಮುಗಿದ ಕೈ... ಯಾವುದನ್ನೂ ನೋಡುವುದಿಲ್ಲ. ಬರಬೇಕೆಂದರೆ ನೀನು ಬರಬೇಕಷ್ಟೇ ಎಂದು ಎಳೆದುಕೊಂಡು ಹೋಗಿ ಬಿಡುತ್ತದೆ. ಹಾಗಿಲ್ಲದೇ ಹೋಗಿದ್ದರೆ ಖುಷ್ಕುಷಿಯಾಗಿ ಜಲಪಾತದೆದುರು ನಿಂತುಕೊಂಡು ವಿಡಿಯೋ ಮಾಡಿಸಿಕೊಳ್ಳುತ್ತಿದ್ದ ಶರತ್‌ ಅದ್ಯಾಕೆ ಹಾಗೆ ಬಿದ್ದು ಸಾವಿನೊಂದಿಗೆ ಹೋಗಿ ಬಿಡುತ್ತಿದ್ದ ಹೇಳಿ?! ಆತ ಸಾಯುವುದಕ್ಕೆಂದು ಅಲ್ಲಿ ಹೋಗಿರಲಿಲ್ಲ. ಒಂದೊಮ್ಮೆ ಹಾಗೆ ಹೋಗಿದ್ದರೂ ಆತ ಇಷ್ಟು ಚೆಂದದ ವಿಡಿಯೋ ಮಾಡಿಸಿಕೊಳ್ಳುತ್ತಿರಲಿಲ್ಲ. ಬದುಕಬೇಕು, ಬದುಕಿಗೆ ಇನ್ನಷ್ಟು ಬಣ್ಣ ತುಂಬಿಕೊಳ್ಳಬೇಕು ಎನ್ನುವ ಕನಸುಗಳೊಂದಿಗೇ ಭದ್ರಾವತಿಯ ಶರತ್‌ ಜಲಪಾತದೆದುರು ಇರುವ ಬಂಡೆಗಲ್ಲಿನ ಮೇಲೆ ನಿಂತಿದ್ದಾನೆ. ಹೀಗೆ ನಿಂತವನೆದುರಿಗೇ ’ಸಾವು’ ತನ್ನ ಅಪ್ಪುಗೆಗೆಳೆದುಕೊಳ್ಳಲು ಹೊಂಚು ಹಾಕಿ ಕುಳಿತಿತ್ತು ಎಂದು ಶರತ್‌ಗಾಗಲೀ, ಶರತ್‌ ವಿಡಿಯೋ ಮಾಡುತ್ತಿದ್ದ ಜೊತೆಗಿದ್ದ ಸ್ನೇಹಿತನಿಗಾಗಲೀ ಕಾಣಿಸಿರಲಿಲ್ಲ... ಕಾಣಿಸುವುದು ಸಾಧ್ಯವೂ ಇಲ್ಲ.