ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧಾರವಾಡಿಗರನ್ನೇ ಒಳಗೊಳ್ಳದೇ ದುಃಸ್ವಪ್ನವಾಯಿತೇ ಸಾಹಿತ್ಯ ಸಮ್ಮೇಳನ?!

ಇಮೇಜ್
‘ಉತ್ತರ ಕರ್ನಾಟಕದ ಮಂದಿ ಮಾತು ಒರಟಿರಬಹುದಾದರೂ, ಮನಸ್ಸು ಮಾತ್ರ ಮೃದು’ ಎನ್ನುವ ಮಾತು ನನ್ನದೇ ಅನುಭವದಲ್ಲಿ ಇಷ್ಟು ದಿನ ಸತ್ಯವೆನ್ನಿಸಿತ್ತಾದರೂ, ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಾಲ್ಕು ದಿನದ ಅನುಭವ ಈ ಮಾತನ್ನು ಸುಳ್ಳಾಗಿಸಿಬಿಟ್ಟಿತು. ಯಾಕೆಂದರೆ ಧಾರವಾಡದಲ್ಲಿದ್ದ ನಾಲ್ಕು ದಿನವೂ ಧಾರವಾಡಿಗರು ಪರವೂರಿನಿಂದ ಬಂದ ನನ್ನಂತಹವರನ್ನು ಹೆಜ್ಜೆ ಹೆಜ್ಜೆಗೂ ಸುಲಿಯುತ್ತಿದ್ದಿದ್ದು ನೋಡಿದರೆ, ಕಾಲವೇ ಬದಲಾಗಿದೆಯಾ ಅಥವಾ ಉತ್ತರ ಕರ್ನಾಟಕದ ಮಂದಿಯ ಮನಸ್ಸೆಂದರೆ ಮೃದು, ನಿಷ್ಕಲ್ಮಶ ಪ್ರೀತಿ ತೋರಿಸುವಂತಹದ್ದು ಎನ್ನುವುದೇ ತಿರುವುಮುರುವಾಗಿದೆಯಾ ಅನ್ನಿಸಿಬಿಟ್ಟಿತು. ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಾಶಕನಾಗಿ ಪುಸ್ತಕ ಮಳಿಗೆಗಳನ್ನು ಹಾಕುತ್ತಿರುವ ನಾನು, ನನ್ನ ಅನುಭವದಲ್ಲಿ ಇಷ್ಟು ಕೆಟ್ಟ ಮತ್ತು ಉಸಿರುಗಟ್ಟಿಸುವಂತಹ ಸಾಹಿತ್ಯ ಸಮ್ಮೇಳನವನ್ನು ನೋಡಿಯೇ ಇರಲಿಲ್ಲ. ಅಷ್ಟರಮಟ್ಟಿಗೆ ಧಾರವಾಡದ ಸಾಹಿತ್ಯ ಸಮ್ಮೇಳನ ನಾ ಕಂಡ ಸಮ್ಮೇಳನಗಳಲ್ಲೇ ಅತಿ ಕೆಟ್ಟ ಸಮ್ಮೇಳನವಾಗಿ ನನ್ನ ಮನದಲ್ಲುಳಿಯಿತು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಈ ಸಮ್ಮೇಳನಕ್ಕೆ ಧಾರವಾಡದ ನಗರ ಭಾಗದಿಂದ ಅಜಮಾಸು ಆರು ಕಿಲೋಮೀಟರ್ ದೂರವಿತ್ತು. ಈ ದೂರವನ್ನು ಹತ್ತಿರವಾಗಿಸುವ ಸಹೃದಯತೆ ಧಾರವಾಡಿಗರದ್ದಾಗಿದ್ದರೆ, ಬಹುಶಃ ಪರವೂರಿನಿಂದ ಸಮ್ಮೇಳನದ ಸಂಭ್ರಮದ ಒಂ

ಇಲ್ಲಿ ಕುಳಿತು ಯುದ್ಧದ ಮಾತನಾಡುವ ಬದಲು,ನಾವೇ ಯುದ್ಧಭೂಮಿಗೆ ಹೋಗೋಣ...

ಹೀಗೆ ಮಾಡಬಹುದಾ? ಒಮ್ಮೆ ಗಂಭೀರವಾಗಿ ಯೋಚಿಸೋಣ. ಉಗ್ರರ ದಾಳಿಯಿಂದ ನಮ್ಮ ನಲ್ವತ್ತಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡಿದ್ದೇವೆ. ಈ ಹೊತ್ತಿನಲ್ಲಿ ನಮ್ಮೆಲ್ಲರ ಎದೆಯೊಳಗೆ ಪ್ರತೀಕಾರದ ಕಿಡಿಯೊಂದು ಹೊತ್ತಿ ಉರಿಯುತ್ತಿದೆ. ನೆರೆಯ ಶತ್ರು ದೇಶಕ್ಕೆ ತಕ್ಕ ಪಾಠ ಕಲಿಸಲೇಬೇಕೆಂದು ನಾವೆಲ್ಲರೂ ಒತ್ತಾಯಿಸುತ್ತಿದ್ದೇವೆ. ಮುಂದಿನ ನಡೆ ಬಗ್ಗೆ ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರವೂ ಹೇಳಿದೆ. ಯುದ್ಧವಾಗಬೇಕು ಮತ್ತು ಒಮ್ಮೆ ನೆರೆಯ ಶತ್ರು ದೇಶ ಮತ್ತು ಆ ದೇಶ ಸಾಕುತ್ತಿರುವ ಉಗ್ರಗಾಮಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟು ’ನಾವೇನೆಂದು ತೋರಿಸಬೇಕು’ ಎನ್ನುವ ಹುಮ್ಮಸ್ಸೂ ನಮ್ಮೆಲ್ಲರಲ್ಲೂ ಪುಟಿಯುತ್ತಿದೆ. ಈ ಪ್ರತೀಕಾರಕ್ಕೆ ನಮ್ಮ ಸೈನಿಕರು ಮಾತ್ರವೇ ಯಾಕೆ ಮುನ್ನುಗ್ಗಿ ಹೋಗಬೇಕು. ನಾವೂ ಹೋಗೋಣವಾ? ಇದಕ್ಕೆ ನಮ್ಮ ದೇಶ ಮತ್ತು ಸರ್ಕಾರ ಅನುಮತಿ ಕೊಡುತ್ತದೆಯೋ ಇಲ್ಲವೋ ಬೇರೆ ಮಾತು. ಆದರೂ ನಮ್ಮ ಸೈನಿಕರು ಮಾಡುವ ಕೆಲಸವನ್ನು ಇಲ್ಲಿ ಬೆಚ್ಚಗೆ ಕುಳಿತುಕೊಂಡ ನಾವೂ ಮಾಡೋಣ ಅಥವಾ ಅವರ ಜೊತೆಗೆ ಯುದ್ಧ ಭೂಮಿಯಲ್ಲಿ ನಿಲ್ಲೋಣ. ಅದಕ್ಕಾಗಿ ಈಗ ಯುದ್ಧ ಮಾಡಲೇಬೇಕೆಂದು ಒತ್ತಾಯಿಸುತ್ತಿರುವ ಈ ದೇಶದ ಪ್ರಜೆಗಳಾದ ನಾವೆಲ್ಲರೂ ಪ್ರಧಾನಿ ಮೋದಿಯವರಿಗೆ, ರಕ್ಷಣಾ ಸಚಿವಾಲಯಕ್ಕೆ ’ಇನ್ನು ನಾವು ಸುಮ್ಮನಿರುವುದು ಬೇಡ, ನಮ್ಮ ಸಹೋದರ ಸೈನಿಕರನ್ನು ಬಲಿ ಪಡೆದುಕೊಂಡ ಉಗ್ರಗಾಮಿಗಳಿಗೆ ಬುದ್ಧಿ ಕಲಿಸಿಯೇ ಬಿಡೋಣ. ಇದಕ್ಕಾಗಿ ಈ ದೇ