ಈಕೆ ಎಲ್ಲರಂತೆ ’ಟೈಮ್‌ಪಾಸ್ ತಂಗಿ’ ಅಲ್ಲ!!
ಈ ಬದುಕಿಗೆ ಜೊತೆಯಾಗುವ ಕೆಲವು ಬಂಧಗಳೇ ಹಾಗೇ, ಅವು ಯಾವತ್ತೂ ಬದಲಾಗುವುದಿಲ್ಲ. ದೂರಾಗುವುದಿಲ್ಲ. ಮುಖ್ಯವಾಗಿ ನಾವೇನು, ನಮ್ಮಲ್ಲಿ ಏನಿದೆ, ಏನಿಲ್ಲ ಎನ್ನುವುದನ್ನೆಲ್ಲ ಲೆಕ್ಕಕ್ಕೇ ಇಟ್ಟುಕೊಳ್ಳುವುದಿಲ್ಲ. ಮಮತಾ ನಾಯ್ಕ ಎನ್ನುವ ಕುಮಟಾ ಕೋಡ್ಕಣಿಯ ಈ ತಂಗಿ ಕೂಡಾ ಹಾಗೇ. ಈ ತಂಗಿ ನನಗೆ ಸಿಕ್ಕಿದ್ದು ನಾನೊಂದು ಪತ್ರಿಕೆಯ ಸಂಪಾದಕನಾಗಿ ಪ್ರೀತಿ ಮತ್ತು ಆತ್ಮೀಯತೆಯಿಂದ ಏನೋ ಒಂದಿಷ್ಟು ಬರೆಯುತ್ತಿದ್ದೆ ಎನ್ನುವ ಕಾರಣಕ್ಕೆ. ಗಣೇಶಣ್ಣ ಅಂತಲೇ ಮೊದಲ ಪತ್ರವನ್ನು ಬರೆದಿದ್ದ ಈ ತಂಗಿ ನನಗೆ ಸಿಕ್ಕಿ ಹತ್ತು ವರ್ಷಕ್ಕಿಂತ ಹೆಚ್ಚಾಗಿದೆ. ಈಕೆ ನನಗೆ ತಂಗಿಯಾಗಿ ಪರಿಚಯವಾದ ಇಷ್ಟು ವರ್ಷಗಳಲ್ಲಿ ಕಾಲದ ನದಿಯಲ್ಲಿ ಅದೆಷ್ಟು ನೀರು ಹರಿದು ಹೋಗಿದೆಯೋ!? ಅಂಚೆಯಲ್ಲಿ ಬರುತ್ತಿದ್ದ ಪತ್ರಗಳಿಂದ ಎಸ್‌ಎಂಎಸ್ಸಿಗೆ, ಎಸ್‌ಎಂಎಸ್ಸಿನಿಂದ ವಾಟ್ಸಪ್ಪಿಗೆ... ಇದೇ ರೀತಿ ನಮ್ಮಿಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಈ ತಂಗಿ ಮಾತ್ರ ನನ್ನ ವಿಷಯದಲ್ಲಿ ಬದಲಾಗಿಲ್ಲ. ಆಕೆ ನಾನೊಂದು ಪತ್ರಿಕೆಯ ಸಂಪಾದಕನಾಗಿದ್ದಾಗ ಹೇಗೆ ಪ್ರೀತಿಯಿಂದ ಇದ್ದಳೋ, ಬದುಕಿನೆಲ್ಲವನ್ನೂ ಹಂಚಿಕೊಳ್ಳುತ್ತಿದ್ದಳೋ, ಆ ಪತ್ರಿಕೆಯಿಂದ ಹೊರಬಂದು ನಾನು ಕೇವಲ ’ಗಣೇಶ’ನಾಗಿ ಬದುಕಲಾರಂಭಿಸಿದಾಗಲೂ ಅದೇ ಪ್ರೀತಿಯಲ್ಲಿ ನನ್ನನ್ನು ಮೂಕನನ್ನಾಗಿಸುತ್ತಿದ್ದಾಳೆ. ಈ ತಂಗಿಯ ಬಗ್ಗೆ ಈಗ ಹೇಳಲಿಕ್ಕೂ ಕಾರಣವಿದೆ. ಮೊದಲೇ ಹೇಳಿದಂತೆ ಕಾಲ ಸಾಕಷ್ಟು ಬದಲಾಗಿದೆ. ಆ ಕಾಲಕ್ಕೆ ತಕ್ಕಂತೆ ಆಕೆಯೂ ಅಪ್