ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವನು ಅಪ್ಪ ಹೇಳಿದ ಆ ಮಾತನ್ನು ಮರೆಯದೇ ಹೋಗಿದ್ದರೆ...

ಇಮೇಜ್
ಆಗ ನಾನು ಅರೆಕಾಲಿಕ ಸಿನಿಮಾ ಪತ್ರಕರ್ತನಾಗಿದ್ದೆ. ಆಗಾಗ ಸಿನಿಮಾದವರನ್ನು ಭೇಟಿಯಾಗುತ್ತಿದ್ದೆ. ಹೀಗಿದ್ದಾಗಲೇ ಒಮ್ಮೆ ದರ್ಶನ್ ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಶೂಟಿಂಗಿನಲ್ಲಿದ್ದೇನೆ, ಶೂಟಿಂಗ್ ಸ್ಪಾಟಿಗೇ ಬನ್ನಿ. ಇಲ್ಲೇ ಮಾತನಾಡೋಣ ಎಂದರು. ಮಲ್ಲೇಶ್ವರ ಸಮೀಪದ ಗ್ರೌಂಡೊಂದರಲ್ಲಿ ಶೂಟಿಂಗ್ ನಡೆಯುತ್ತಿತ್ತು. ಯಾವ ಸಿನಿಮಾ ಎಂದು ನೆನಪಿಲ್ಲ. ಆ ಸಿನಿಮಾದಲ್ಲಿ ಮಾನ್ಯ ಹೀರೋಯಿನ್‌. ದರ್ಶನ್‌ ಬ್ರೇಕ್‌ನಲ್ಲಿ ನಮ್ಮ ಜೊತೆ ಮಾತನಾಡಿದರು. ಹೇಗೂ ಬರೋದು ಬಂದಿದ್ದೇವಲ್ಲ, ಸಿಕ್ಕರೆ ಮಾನ್ಯಳ ಜೊತೆಗೂ ಮಾತನಾಡಿ ಒಂದು ಲೇಖನ ಬರೆಯಬಹುದು ಎಂದುಕೊಂಡು, ದರ್ಶನ್ ಬಳಿ, ’ಸ್ವಲ್ಪ ಮಾನ್ಯಳನ್ನು ಇಂಟ್ರಡ್ಯೂಸ್‌ ಮಾಡಿಕೊಡ್ತೀರಾ?’ ಎಂದು ಕೇಳಿದೆವು. ಆಕೆ ಬ್ರೇಕ್‌ನಲ್ಲಿ ತನ್ನ ಕ್ಯಾರಾವಾನ್‌ನಲ್ಲಿ ರೆಸ್ಟ್‌ ಮಾಡುತ್ತಿದ್ದಳು. ದರ್ಶನ್‌ ಕೂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲೇ ಆ ಕ್ಯಾರಾವಾನ್‌ ನಿಂತಿತ್ತು. ದರ್ಶನ್‌ ಆಯಿತು, ಪರಿಚಯಿಸಿಕೊಡುತ್ತೇನೆ. ಮಾತನಾಡಿ ಎಂದು ಹೇಳಬಹುದಿತ್ತು. ಅದು ಅವರಿಂದ ಆಗದೇ ಇರುವ ಕೆಲಸವೇನೂ ಆಗಿರಲಿಲ್ಲ. ಆದರೆ ದರ್ಶನ್‌ ಹಾಗೆ ಮಾಡಲಿಲ್ಲ. ಬದಲಿಗೆ, ’ಸಿನಿಮಾಕ್ಕೆಷ್ಟು ಬೇಕೋ ಅಷ್ಟು ಮಾತ್ರ ನಾನು ನನ್ನ ಸಹನಟಿಯರ ಜೊತೆ ಮಾತನಾಡೋದು. ಅದರಾಚೆಗೆ ನಾನು ಅವರ ಜೊತೆ ಕಾಂಟ್ಯಾಕ್ಟಿನಲ್ಲಿ ಇರೋದಿಲ್ಲ. ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳೋರು. ಊಟದ ತಟ್ಟೆ ಮುಂದೆ, ಹುಡುಗಿಯರ ಮುಂದೆ ಹೆಚ್ಚು ಹೊತ್ತು ಕೂರಬಾರದು ಅಂತ. ಅದನ್ನ

ಬೆಳಕಾದಳೇ ಅವಳು...?!

ಇಮೇಜ್
ಅದು ಎಂದಿನ ಸಂಜೆಯಾಗಿರಲಿಲ್ಲ. ನನಗದು ಅಂದಾಜೂ ಇರಲಿಲ್ಲ. ಎಂದಿನಂತೆಯೇ ಅವಳನ್ನು ಭೇಟಿಯಾಗಲು ನಾನು ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಆ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮಾತ್ರ. ಬೆಳಿಗ್ಗೆ ಹತ್ತು ಗಂಟೆಗೆ ಪುರೋಹಿತರು ದೇವಸ್ಥಾನದ ಬಾಗಿಲು ಮುಚ್ಚಿ ಹೋದರೆ ಮತ್ತೆ ಬರುವುದು ಮಾರನೇಯ ದಿನ ಬೆಳಿಗ್ಗೆ ಆರು ಗಂಟೆಗೆ. ಅಷ್ಟು ಹೊತ್ತೂ ದೇವಸ್ಥಾನದ ಸುತ್ತೆಲ್ಲ ದೇವರೂ ಇಲ್ಲದ ಏಕಾಂತ. ಆದ್ದರಿಂದಲೇ ನಮ್ಮಿಬ್ಬರ ಭೇಟಿಗೆ ಅದು ಸರಿಯಾದ ಜಾಗವಾಗಿತ್ತು. ಅವಳು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವ ದಾರಿಯಿಂದ ಕೆರೆಯತ್ತ ಹೋಗುವ ದಾರಿಗೆ ಎಡಕ್ಕೆ ತಿರುಗಿಕೊಂಡು ಎರಡು ನಿಮಿಷ ನಡೆದರೆ ಈ ದೇವಸ್ಥಾನದ ಎದುರಿರುವ ಬನ್ನಿಮರದ ಕಟ್ಟೆ ಸಿಕ್ಕುತ್ತಿತ್ತು. ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೂ ಇಲ್ಲೇ. ಒಂದು ಸೋಮವಾರ ದೇವಸ್ಥಾನದ ದೇವರ ದರ್ಶನಕ್ಕೆಂದು ಬಂದವನಿಗೆ ಅವಳ ದರ್ಶನವಾಗಿತ್ತು. ಮೊದಲ ದರ್ಶನದಲ್ಲೇ ವರವೊಂದು ಸಿಕ್ಕ ಸೂಚನೆ... ಮೊದಲು ನಗು, ಆನಂತರ ಒಂದಷ್ಟು ದೀರ್ಘವಾದ ಮೌನ, ಮೌನವಿನ್ನು ಹತ್ತಿರ ಸುಳಿಯುವುದಿಲ್ಲ ಎನ್ನುವಂತೆ ಮಾತಿನ ಗೆಜ್ಜೆಗಳ ಸಣ್ಣ ಸಪ್ಪಳ, ಆನಂತರ ಕೊನೆಯೇ ಇಲ್ಲವೆನ್ನುವಂತೆ ಆರಂಭವಾದ ಘಲ್‌ಘಲ್‌...  ಅಂದಹಾಗೇ, ಹೇಳಲು ಮರೆತಿದ್ದೆ. ಅವಳು ನೃತ್ಯ ಶಿಕ್ಷಕಿ. ಪಕ್ಕದ ಪಟ್ಟಣದಲ್ಲಿರುವ ನೃತ್ಯ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ’ನೀವು?’ ನಾವಿಬ್ಬರೇ ಇದ್ದ ಏಕಾಂತದಲ್ಲ