ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಕ್ಕಳು ನಿಮ್ಮ ಕನಸು ನನಸಾಗಿಸುವ ಕೂಲಿಯಾಳುಗಳಲ್ಲ!!

  ಆಕೆ ಸೋನಾ ಅಬ್ರಾಹಂ. ಮೂಲತಃ ಕೇರಳದ ಈಕೆ ತನ್ನ 14ನೇ ವಯಸ್ಸಿನಲ್ಲಿ ಅಂದರೆ ಒಂಭತ್ತು ಅಥವಾ ಹತ್ತನೇ ಕ್ಲಾಸಿನಲ್ಲಿದ್ದಾಗ ಮಲೆಯಾಳಂನ ‘ಫಾರ್ ಸೇಲ್’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಳು. ತಂದೆ ತಾಯಿ ಹೇಳಿದ್ದೆಲ್ಲವನ್ನೂ ಸರಿ ಎನ್ನುವ, ಇಷ್ಟವಿದ್ದರೂ ಇಲ್ಲದೇ ಇದ್ದರೂ ತಂದೆ ತಾಯಿ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಯಾವ ಕೆಲಸವನ್ನೂ ಖುಷಿಯಿಂದಲೇ ಮಾಡುವ ಈ ವಯಸ್ಸಿನಲ್ಲಿ ಸೋನಾ, ಫಾರ್ ಸೇಲ್ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾಗುವ ಹುಡುಗಿಯ ಪಾತ್ರವೊಂದರಲ್ಲಿ ನಟಿಸಿದ್ದಳು. ಇಂತಹ ಪಾತ್ರದಲ್ಲಿ ನಟಿಸುವಾಗ, ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಸೋನಾ ಮತ್ತು ಆಕೆಯ ಅಮ್ಮನಿಗೆ ‘ನಾವಿಲ್ಲಿ ಚಿತ್ರೀಕರಿಸಿರುವ ಅತ್ಯಾಚಾರ ದೃಶ್ಯದ ಅಷ್ಟೂ ಭಾಗವನ್ನು ಸಿನಿಮಾದಲ್ಲಿ ಬಳಸುವುದಿಲ್ಲ. ಸಿನಿಮಾಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರ ಬಳಸಿಕೊಂಡು ಉಳಿದಿರುವ ದೃಶ್ಯಗಳನ್ನು ಡಿಲಿಟ್ ಮಾಡುತ್ತೇವೆ’ ಎಂದು ಹೇಳಿದ್ದರಂತೆ. ಆದರೆ ಸಿನಿಮಾದಲ್ಲಿ ಇಲ್ಲದ ಸೋನಾ ನಟಿಸಿರುವ ಅತ್ಯಾಚಾರದ ದೃಶ್ಯಗಳು ಈಗ ಅಶ್ಲೀಲ ವೆಬ್‌ಸೈಟ್ ಮತ್ತು ಯುಟ್ಯೂಬಿನಲ್ಲಿ ಪ್ರಸಾರವಾಗುತ್ತಿದೆ! ಈ ದೃಶ್ಯ ಲೀಕ್ ಆಗುವುದರ ಹಿಂದೆ ಫಾರ್ ಸೇಲ್ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಷ್ಟೇ ಇರಲು ಸಾಧ್ಯ ಎನ್ನುವುದನ್ನು ಅರಿತ ಸೋನಾ ಮತ್ತು ಆಕೆಯ ಅಮ್ಮ ಕೇರಳದ ಉತ್ತರ ಎರ್ನಾಕುಲಂನ ಪೊಲೀಸ್ ಸ್ಟೇಶನ್ನಿನಲ್ಲಿ 2016ರಲ್ಲಿ ಈ ಬಗ್ಗೆ ದೂರು ದಾಖಲಿಸಿದರೂ, ಈ ಬಗ್ಗೆ ಗಂಭೀರ ಕ್ರಮ ಕೈಗ