ಪೋಸ್ಟ್‌ಗಳು

ಏಪ್ರಿಲ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಈಗ ಆರು ಪಾಸಾಗಿ ಏಳು...

ಇಮೇಜ್
ಪರೀಕ್ಷೆಗಳೆಲ್ಲ ಮುಗಿದಿರುತ್ತವೆ. ರಿಸಲ್ಟು ಕೊಡುವ ಏಪ್ರಿಲ್ ಹತ್ತನೇ ತಾರೀಖಿಗೆ ಇನ್ನೂ ಹತ್ತು ಹದಿನೈದು ದಿನವಿರುತ್ತದೆ. ಈ ಗ್ಯಾಪಿನಲ್ಲಿ ಟೀಚರ‍್ರುಗಳಿಗೆ ಶಾಲೆಯಲ್ಲಿ ಉತ್ತರ ಪತ್ರಿಕೆ ನೋಡುವ ಕೆಲಸವಿರುತ್ತದೆ, ಆದ್ದರಿಂದ ಅಧಿಕೃತವಾಗಿ ರಜೆ ಘೋಷಣೆ ಆಗದೇ ಇದ್ದರೂ ಶಾಲೆಗಳಿಗೆ ರಜೆ... ಈ ಸಮಯದಲ್ಲಿ ಯಾರಾದರೂ ಮಾತಿಗೆ ಸಿಕ್ಕು, ‘ನೀನು ಎಷ್ಟನೇ ಕ್ಲಾಸು?’ ಎಂದು ಕೇಳಿದರೆ, ರಿಸಲ್ಟ್ ಬಾರದೇ ಇದ್ದರೂ ಐದನೇ ಕ್ಲಾಸು ಪಾಸೇ ಆಗಿಬಿಟ್ಟಿದ್ದೇವೆ ಎನ್ನುವ ಭರ್ತಿ ಆತ್ಮವಿಶ್ವಾಸದಿಂದ ‘ಆರನೇ ಕ್ಲಾಸು’ ಎಂದು ಬಿಡುತ್ತೇವೆ. ಕೇಳಿದವರಿಗೆ ಏಪ್ರಿಲ್ ಹತ್ತಕ್ಕೆ ರಿಸಲ್ಟ್ ಎನ್ನುವುದು ಗೊತ್ತಿಲ್ಲದಿದ್ದರೂ, ಗೊತ್ತಿದ್ದೂ ನೆನಪಿಲ್ಲದೇ ಹೋದರೂ ಅದು ಸಹಜವಾಗಿಯೇ ಆ ಸಮಯದಲ್ಲಿ ಇಂತಹ ಪ್ರಶ್ನೆ ಕೇಳುವ ಎಲ್ಲರಲ್ಲೂ ಹುಟ್ಟುವ ಅನುಮಾನವೇನೋ ಎನ್ನುವಂತೆ, ‘ಐದನೇ ಕ್ಲಾಸು ಪಾಸಾಗಿ ಆರಾ? ಅಥವಾ ಆರು ಪಾಸಾಗಿ ಏಳಾ?’ ಎಂದು ಅವರು ಕೇಳುವುದು, ನಾವು ಮತ್ತೆ ಸಮಜಾಯಿಷಿ ಕೊಡುವುದು... ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗಿ ಹತ್ತು ಹದಿನೈದು ದಿನ ಕಳೆಯುವವರೆಗೂ ಇದು ನಮ್ಮೆಲ್ಲರ ಬದುಕಿನ ಪುಟಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಪ್ರತೀ ವರ್ಷದ ಮಾರ್ಚ್-ಏಪ್ರಿಲ್ ತಿಂಗಳ ನೆನಪುಗಳು. ಇದೊಂದು ರೀತಿಯ ಗೊಂದಲದ ಪಿರಿಯಡ್ಡು. ಪರೀಕ್ಷೆ ಬರೆದ ನಮಗೂ ಗೊಂದಲವೇ. ಎಷ್ಟನೇ ಕ್ಲಾಸು ಎಂದು ಪ್ರಶ್ನಿಸುವವರಿಗೂ ಗೊಂದಲ ಮತ್ತು ಅನುಮಾನ. ಆಗ ಈಗಿನ ರೀತಿ ಸಣ್ಣ ಕ್ಲಾಸಿನ ಮಕ್ಕಳೆಲ್ಲರನ್ನೂ