ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿಸಿಲು ಮಳೆಯಲ್ಲೇ ಅರಳಿ ಕೊಚ್ಚಿ ಹೋದ ಪ್ರೀತಿಯ ನೆನಪಿನಲ್ಲಿ...

ಇಮೇಜ್
ಅವತ್ತು ಬೆಂದೇ ಹೋಗುವಂತಹ ಬಿಸಿಲು ಇದ್ದಕ್ಕಿದ್ದ ಹಾಗೇ ಮಂಕಾಗಿ ಭರ‍್ರೋ ಎಂದು ಮಳೆ ಸುರಿಯಲಾರಂಭಿಸಿತು. ವರ್ಕ್ ಫ್ರಂ ಹೋಂನಲ್ಲಿದ್ದ ನಾನು ಮನೆಯೊಳಗೆ ಧಗೆ ತಡೆಯಲಾಗದೆ ಹೊರಗೆ ಬಂದು ಜಗುಲಿಯ ಮೇಲೆ ಕುಳಿತು, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು, ಮಳೆಯ ಪರದೆಯಿಂದಾಚೆ ಕಾಣುತ್ತಿದ್ದ ಮನೆಯ ಕಾಂಪೌಂಡು, ಗೇಟು, ಅದರಾಚೆಗಿನ ರಸ್ತೆಯನ್ನು ನೋಡುತ್ತಿದ್ದಾಗ... ಮಳೆಯ ನಡುವೆ ಕಾಮನಬಿಲ್ಲಿನಂತೆ ಕಾಣಿಸಿಕೊಂಡವಳು ನೀನು! ನನ್ನ ಪಾಲಿಗೆ ನೀನು ಕಾಮನಬಿಲ್ಲೇ... ಯಾವ ಸೂಚನೆಯನ್ನೂ ಕೊಡದೇ ಬಂದ ಮಳೆಯಲ್ಲಿ ಸಿಕ್ಕಿದ್ದ ನೀನು ತಲೆಯ ಮೇಲೆ ಚೂಡೀದಾರದ ವೇಲ್‌ ಹಾಕಿಕೊಂಡು ಅವಸರವಸರವಾಗಿ ನಡೆದು ಹೋಗುತ್ತಿದ್ದೆ. ಆ ಅವಸರದಲ್ಲಿ ನನ್ನೆರಡು ಕಣ್ಣುಗಳು ನಿನ್ನನ್ನೇ ನೋಡುತ್ತಿದೆ ಎಂದು ನಿನಗೆ ತಿಳಿದಿದ್ದಾದರೂ ಹೇಗೆ? ಅದಿವತ್ತಿಗೂ ನನಗೆ ಅಚ್ಚರಿಯೇ... ಹಾಗೆ ನೀನು ನೋಡುತ್ತಿದ್ದರೆ, ನಿನ್ನನ್ನೇ ನೋಡುತ್ತಿದ್ದ ನನಗೂ ಕಣ್ಣು ಕದಲಿಸಲಾಗಲಿಲ್ಲ. ಕಣ್ಣು ಕಣ್ಣುಗಳು ಕಲೆತು, ಅದೆಷ್ಟೋ ವರ್ಷಗಳ ಪರಿಚಯವೇನೋ ಎನ್ನುವಂತೆ ಕಣ್ಣಲ್ಲೇ ಹಾಯ್‌ ಹೇಳಿ, ನಾನು ಕೈ ಸನ್ನೆಯಲ್ಲೇ ಕೊಡೆಯನ್ನು ತೋರಿಸಿ ತರಲಾ ಎಂದು ಅದ್ಯಾವ ಧೈರ್ಯದಿಂದ ಕೇಳಿದೆನೋ... ಬಹುಶಃ ಅವತ್ತು ಹಾಗೆ ಕೇಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. ಯಾಕೆಂದರೆ ಹಾಗೆ ಕೇಳಿದ ತಪ್ಪಿಗೇ ಇವತ್ತೂ ಅವತ್ತಿನಂತೆಯೇ ಮತ್ತೆ ಬಿಸಿಲ ದಣಿಸಿ ಸುರಿಯುತ್ತಿರುವ ಮಳೆಯಲ್ಲಿ ನಾನೊಬ್ಬನೇ ಹೀಗೆ

ಪರಿಚಿತರಾಗಲು ಬಂದು ಅಪರಿಚಿತರಾಗಿಯೇ ಉಳಿದ ಎಲ್ಲರಿಗೂ...

ಇಮೇಜ್
ಪರಿಚಿತರು ಎಂದರೆ ಯಾರು? ಎದುರು ಸಿಕ್ಕಾಗ ಪರಿಚಯದ ನಗು ಚೆಲ್ಲುವವರು, ನಾ ಹೇಳುವುದನ್ನು ಮನಸ್ಸಿಟ್ಟು ಕೇಳಿಸಿಕೊಳ್ಳುವವರು, ಅವರು ಹೇಳಿದ್ದು ನನ್ನದೆನ್ನಿಸುವಂತೆ ಮಾಡುವವರು, ಕಷ್ಟಗಳಲ್ಲಿ ಜೊತೆಯಾಗುವವರು, ಸಂತಸದಲ್ಲಿ ಒಂದಾಗುವವರು... ಹೀಗೆಲ್ಲ ಆತುಕೊಳ್ಳುವ ಬಂಧಕ್ಕೆ ನಾವು ’ಸ್ನೇಹಿತರು’, ’ಪ್ರೀತಿಯವರು’, ’ನಮ್ಮವರು’ ಎಂದೆಲ್ಲ ಹೆಸರಿಡುತ್ತಾ ಹೋಗುತ್ತೇವೆ. ಹೀಗಿಟ್ಟ ಹೆಸರಿಗೆ ತಕ್ಕ ಹಾಗೇ ಅವರು ನಮ್ಮ ಬದುಕಿನ ಅವರದ್ದೆನ್ನುವ ಕ್ಷಣಗಳಲ್ಲಿ ನಮ್ಮವರಾಗುತ್ತಿರುತ್ತಾರೆ. ಆ ಕಾರಣದಿಂದಲೇ ಅವರ ಮತ್ತು ನಮ್ಮ ನಡುವೆ ’ಅಪರಿಚಿತತೆ’ ಇರುವುದಿಲ್ಲ. ಒಂದೊಮ್ಮೆ ಪರಿಚಿತರೇ ಅಪರಿಚಿತರಂತೆ ಇದ್ದು ಬಿಟ್ಟರೆ?! ನೋಡಿದರೂ ನೋಡದಂತೆ ಹೋಗುವವರು, ಇವನ್ಯಾತರವ ಎಂದು ಬೇಕೆಂದೇ ದೂರದಲ್ಲಿಡುವವರು, ಅಂತಸ್ತು-ಅಧಿಕಾರ ಇದ್ದರಷ್ಟೇ ಮಾತನಾಡುತ್ತೇನೆ, ಇಲ್ಲದೇ ಹೋದರೆ ಮೂಸಿಯೂ ನೋಡುವುದಿಲ್ಲ ಎನ್ನುವವರು... ಅವರವರ ಹುಟ್ಟು, ಬೆಳವಣಿಗೆ ಮತ್ತು ಇದರೊಂದಿಗೆ ಬೆಸೆದುಕೊಳ್ಳುವ ಮನಸ್ಥಿತಿಯಿಂದಾಗಿ ಅಪರಿಚಿತರು ಅನ್ನಿಸಿಬಿಡುವವರಿಂದ ಹೆಚ್ಚಿನ ಬಾರಿ ದೂರವೇ ಉಳಿದುಬಿಡುವುದು, ನನ್ನ ಲೋಕದಲ್ಲಿ ನಾನಿರುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ. ಅಂದಹಾಗೇ, ನನಗೆ ಯಾರನ್ನೂ ದೂರವಿಟ್ಟು ಅಭ್ಯಾಸವಿಲ್ಲ. ಅವರಾಗಿ ದೂರ ಹೋದಾಗ ತೀರಾ ’ನಮ್ಮವರು’ ಎಂದುಕೊಂಡು ಬೆನ್ನು ಬಿದ್ದು ಹೋಗುವ ಜಾಯಮಾನ ನನ್ನದಲ್ಲ. ಅವರೆಲ್ಲಿದ್ದಾರೋ ಅಲ್ಲಿಯೇ ಆರಾಮಾಗಿರಲಿ ಎಂದು ಮನಸ್ಸಿನಲ್ಲಿ ಹೇಳ