ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂಟಿತನ ಎಂದರೆ ಜವಾಬ್ದಾರಿಯಿಂದ ಜಾರಿಕೊಳ್ಳುವುದಾ?!

ಇಮೇಜ್
ಕೆಲವರನ್ನು ಗಮನಿಸಿ ನೋಡಿ. ಅವರ ಒಂಟಿತನ ಎನ್ನುವುದು ಜವಾಬ್ದಾರಿಗಳಿಂದ ದೂರ ಉಳಿಯಲಿಕ್ಕೆಂದು ಅವರೇ ಸೃಷ್ಟಿಸಿಕೊಂಡ ಒಂದು ಗುರಾಣಿಯಂತೆ ಕಾಣಿಸುತ್ತಿರುತ್ತದೆ! ಅವರ ಬದುಕು ಅವರ ಇಷ್ಟ ಎನ್ನುವುದೇನೋ ಸರಿ. ಹಾಗೆಂದು ನೀನು ನಿಭಾಯಿಸಲೇಬೇಕಾದ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಿನ್ನಲ್ಲಿ ’ಒಂಟಿತನ’ದ ಬದುಕು ಎಚ್ಚರಗೊಳ್ಳುವುದೇಕೆ? ನನಗೆ ಯಾರೂ ಬೇಡ, ನಾನು ನನ್ನಷ್ಟಕ್ಕೆ ಬದುಕುತ್ತಿದ್ದೇನೆ ಎನ್ನುವಂತಹ ಮಾತುಗಳು ಯಾರೋ ನಿನ್ನ ಬಳಿ ಕಷ್ಟ ಹೇಳಿಕೊಂಡು ಬಂದಾಗ ಮಾತ್ರ ನೆನಪಾಗುವುದೇಕೆ?! ಅಂದರೆ ಸುಖ ಇದೆ, ನೆಮ್ಮದಿ ಇದೆ ಎನ್ನುವಾಗ ಎಲ್ಲರೊಂದಿಗೂ ಇರುವ ಇಂತಹವರು, ಯಾರೋ ಕಷ್ಟ ಎಂದು ಬಂದಾಗ ಮಾತ್ರ ಒಂಟಿತನದೆಡೆಗೆ ಜಾರಿಕೊಳ್ಳುವ, ಈ ಮೂಲಕ ತಾನು ಒಂಟಿ ಬಾಳು ಬಾಳುತ್ತಿದ್ದೇನೆ, ನನಗೆ ಏಕಾಂಗಿಯಾಗಿರುವುದೇ ಇಷ್ಟ ಎಂದು ತೋರಿಸಿಕೊಳ್ಳಲು ಆರಂಭಿಸುತ್ತಾರೆ. ಒಬ್ಬನೇ. ಜೊತೆಗೆ ಯಾರೂ ಇಲ್ಲ. ಯಾರ ಹಂಗೂ ಇಲ್ಲದೆ ನನಗೆ ಹೇಗನ್ನಿಸುತ್ತದೆಯೋ ಹಾಗಿದ್ದು ಬಿಡಬಹುದು. ಇದನ್ನೇ ’ಏಕಾಂಗಿ ಬದುಕು’ ಎನ್ನುವುದಾ? ಇದರ ಇನ್ನೊಂದು ಹೆಸರೇ ಒಂಟಿತನವಾ? ಹೌದು, ಒಂದು ರೀತಿಯಲ್ಲಿ ಇದು ಅದೇ. ಇಡೀ ಲೋಕವೇ ಒಂದೆಡೆಯಾದರೆ, ಅದರಾಚೆಗೆ ಬಂದು ನಾನೊಬ್ಬನೇ ನನಗನ್ನಿಸಿದಂತೆ ನನ್ನದೇ ಲೋಕದಲ್ಲಿ ಬದುಕುವುದು ಒಂಟಿತನ; ಏಕಾಂಗಿ ಬದುಕು. ಈ ಬದುಕಿನಲ್ಲಿ ಎಂತಹದ್ದೇ ಸಂದರ್ಭ ಬಂದರೂ ನನಗೆ ಯಾರೆಂದರೆ ಯಾರೂ ಬೇಡ ಎನ್ನುವಂತಹ ನಿರ್ಧಾರದೊಂದಿಗೇ ಒಂಟಿತನದ ಬದುಕು ಹೆಜ