ಎಷ್ಟು ದಿನವೆಂದು ಹೀಗೇ ದುಡಿಯುತ್ತೀರಾ?!
ಉಹ್ಞೂಂ, ಅದು ನಮಗೇ ಗೊತ್ತಿರುವುದಿಲ್ಲ. ಬೆಳಗಾಯಿತು ಕೆಲಸಕ್ಕೆ ಹೋಗು, ಕತ್ತಲಾಯಿತು ಮನೆಗೆ ಬಾ, ದಿನವಿಡೀ ದುಡಿದು ದಣಿದಿದ್ದೀಯಾ ಮಲಗು, ಬೆಳಿಗ್ಗೆ ಮತ್ತೆ ಬೇಗ ಏಳು, ದುಡಿಯಲು ಹೋಗಬೇಕಲ್ಲ ಹೊರಟು ಬಿಡು... ಎಲ್ಲೋ ಒಂದು ಭಾನುವಾರ, ಯಾವುದೋ ಹಬ್ಬ, ಹತ್ತಿರದವರ ಮನೆಯಲ್ಲಿನ ವಿಶೇಷ ಇಂತಹ ಕೆಲವೇ ಕೆಲವು ದಿನಗಳನ್ನು ಬಿಟ್ಟರೆ ‘ನನ್ನದೆನ್ನುವ ಬದುಕನ್ನು ನಾನೇ ಕಟ್ಟಿಕೊಳ್ಳಬೇಕು’ ಎಂದು ನಿರ್ಧರಿಸಿಕೊಂಡ ದಿನದಿಂದ ದುಡಿಯಲಾರಂಭಿಸಿದವರು ಉಸಿರು ನಿಲ್ಲಿಸುವವರೆಗೂ ದುಡಿಯುತ್ತಲೇ ಇದ್ದು ಬಿಡುತ್ತೇವಲ್ಲವಾ? ಹಾಗೆ ದುಡಿಯದಿದ್ದರೆ ಬದುಕುವುದು ಹೇಗೆ? ನಮ್ಮ ಲೈಫ್‌ನ್ನು ನಾವು ನೆಮ್ಮದಿಯಾಗಿ ಬದುಕಬೇಕೆಂದರೆ ದುಡಿಯುವ ವಯಸ್ಸಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿಯಬೇಕಷ್ಟೇ ಎಂದು ಕೀ ಕೊಟ್ಟ ಗೊಂಬೆಯಂತೆ ದಿನಬೆಳಗಾದರೆ ದುಡಿಮೆಗೆ ನಿಲ್ಲುವ ನೀವು ಹೇಳಬಹುದು. ಸರಿ, ಒಪ್ಪಿಕೊಳ್ಳೋಣ. ಹಾಗಿದ್ದರೆ ಹೀಗೆ ದುಡಿಯುತ್ತಲೇ ಇರುವುದೇ ನಿಮ್ಮ ಬದುಕಾ? ಬೆಳಗಾಯಿತು ಹೊರಡು, ರಾತ್ರಿ ಬರುವಾಗ ಸುಸ್ತಾಗಿ ಹೈರಾಣಾಗಿ ಹೋಗಿರುತ್ತೀಯಾ ಸುಮ್ಮನೆ ರೆಸ್ಟ್ ಮಾಡು ಎನ್ನುವಂತಹ ಜೀವನವನ್ನು ನೀವು ನಡೆಸುತ್ತಿರುವುದೇ ಹೌದಾದರೆ ನಿಮ್ಮ ಬದುಕು ಇನ್ನೇನಾಗಿರಲಿಕ್ಕೆ ಸಾಧ್ಯವಿದೆ? ಇನ್ನೇನೂ ಆಗಿರುವುದಿಲ್ಲ. ಪ್ರತೀ ತಿಂಗಳು ನನಗೆ ಇಂತಿಷ್ಟು ಹಣ ಸಂಬಳ, ಲಾಭ ಸೇರಿದಂತೆ ಯಾವುದಾದರೂ ಒಂದು ರೂಪದಲ್ಲಿ ಬರಬೇಕು. ಹಾಗೆ ಬಾರದೇ ಹೋದರೆ ಸಣ್ಣ ಕಿಂಡಿಯೂ ಇಲ್ಲದ ಕೋಣೆಯೊಂದರಲ್ಲ...