ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದು ಜೀವದ ಬೆಲೆ ಎಷ್ಟು?!

ಇಮೇಜ್
‘ಪ್ರೀತಿಯ ಅಪ್ಪ ನನ್ನನ್ನು ಕ್ಷಮಿಸಿ. ನನಗೆ ಗೊತ್ತಿದೆ ನೀವು ನನ್ನ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೀರಿ. ಆದರೆ ನಾನು ಮಾಡದ ತಪ್ಪಿಗೆ ನನ್ನನ್ನು ತಪ್ಪಿತಸ್ಥನೆಂದು ನನ್ನ ಮೇಲೆ ಕೇಸ್ ದಾಖಲು ಮಾಡಿ ಎಫ್‌ಐಆರ್ ಹಾಕಿದ್ದಾರೆ. ಅಪ್ಪ ನಾನು ತಪ್ಪು ಮಾಡಿಲ್ಲ ಎಂದರೆ ನೀವು ನಂಬೋದಿಲ್ಲ ಎನ್ನುವುದು ನನಗೆ ಗೊತ್ತು. ಆದರೆ, ನಿಜವಾಗಿಯೂ ನಾನು ಹೊಡೆದಿಲ್ಲ. ಜೀವನದ ಮುಂದಿನ ಹಾದಿಯ ಬಗ್ಗೆ ಬಹಳ ಯೋಚಿಸುವ ನಾನು ಈಗ ಎಫ್‌ಐಆರ್ ಎಂಬ ದೊಡ್ಡ ಕಪ್ಪುಚುಕ್ಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಲ್ಲದೆ ನಿಮಗೆ ಇರುವ ಒಳ್ಳೆಯ ಅಭಿಪ್ರಾಯವನ್ನು ನಾನು ಹಾಳು ಮಾಡುತ್ತಿದ್ದೇನೆ ಎನ್ನುವ ಅನಿಸಿಕೆ ನನ್ನದು. ನಿಮ್ಮಂತ ತಂದೆ ಯಾವ ಮಕ್ಕಳಿಗೂ ಸಿಗಲ್ಲ. ನನ್ನ 21 ವರ್ಷದಲ್ಲಿ ನನಗೆ ಬೇಕೆಂದಿದ್ದು ಕೊಡಿಸಿದ್ದೀರಿ. ಕಷ್ಟಪಟ್ಟು ಸಾಕಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ನಾನು ಇಲ್ಲ ಎಂದು ಈ ಎಫ್‌ಐಆರ್ ಹಾಕಿದ ಮೇಲೆ ಗೊತ್ತಾಯ್ತು. ಅಪ್ಪ ನಾನು ಚೆನ್ನಾಗಿ ಓದುತ್ತಿದ್ದು, ಒಳ್ಳೆಯ ಕೆಲ್ಸಕ್ಕೆ ಸೇರುತ್ತಿದ್ದೆ. ನಿಮ್ಮನ್ನು ಚೆನ್ನಾಗಿ ನೋಡ್ಕೋತಿದ್ದೆ. ಆದರೆ, ಈ ಎಫ್‌ಐಆರ್ ಹಾಕಿದ ಮೇಲೆ ಯಾವ ಕೆಲಸ ಸಿಗಲ್ಲ. ಅಪ್ಪ ನನ್ನನ್ನು ಕ್ಷಮಿಸಿಬಿಡಿ, ಆದರೆ, ಅಪ್ಪ ನಾನು ತಪ್ಪು ಮಾಡಿ ಸಾಯುತ್ತಿಲ್ಲ. ನಾನು ತಪ್ಪು ಮಾಡಿದ್ದರೆ, ಇವತ್ತು ಈ ನಿರ್ಧಾರಕ್ಕೆ ಬರುತ್ತಿರಲಿಲ್ಲ. ನಾನು ಮಾಡದ ತಪ್ಪಿಗೆ ನನ್ನನ್ನು ಹೊಣೆ ಮಾಡಿದ್ದಾರೆ. ಆದ್ದರಿಂದ ನನಗೆ ಮುಖ ತೋರಿ ಸಲು ಆಗುತ್ತ

ಈ ದೇಶದ ಜನರಿಗೆ ಧರಿಸಲು ಬಟ್ಟೆ ಇಲ್ಲದ ಕಷ್ಟದ ದಿನಗಳೂ ಇದ್ದವು...

ಇಮೇಜ್
  ‘ನಾವ್ ಶಾಲಿಗ್ ಹ್ವಾಪತ್ತಿಗ್ ಅಂಗಿ ಚಡ್ಡಿಯೇ ಸಸೂತ್ರ ಇರಲಿಲ್ಲ... ಈಗ ಹಿಜಬ್ ಅಂಬ್ರ್, ಶಾಲ್ ಅಂಬ್ರ್...! ಯಾಕ್ ನಾಚಿಕೆ ಆತಿಲ್ಲ ಮರ‍್ರೇ...! ಬರೀ ಹೇಸಿಗೆ ಅಲ್ದೇ...’ ಹಿಜಾಬ್ ಇಲ್ಲದೇ ನಾವು ಕಾಲೇಜಿಗೆ ಬರುವುದಿಲ್ಲ, ಅವರು ಹಿಜಾಬ್ ಹಾಕಿಕೊಂಡು ಬಂದರೆ ನಾವು ಕೇಸರಿ ಶಾಲು ಧರಿಸಿಯೇ ಕಾಲೇಜಿಗೆ ಬರುವುದು ಸೈ ಎನ್ನುವ ವಾದ ವಿವಾದ ದಿನದಿಂದ ಬಿಸಿಯೇರುತ್ತಿರುವಾಗಲೇ, ಫೇಸ್‌ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಹಂಚಿಕೊಂಡ ಮೇಲಿನ ಈ ಸಾಲುಗಳು ನಮಗೆ ಗೊತ್ತಿದ್ದೂ ನಾವು ಮರೆತಿರುವ ನಮ್ಮದೇ ಬದುಕಿನ ಅದೆಷ್ಟೋ ವಾಸ್ತವ ಸಂಗತಿಗಳನ್ನು ರಪರಪನೆ ಕಣ್ಣಮುಂದೆ ಬಿಚ್ಚಿಟ್ಟಿತು. ಹೌದಲ್ಲವಾ, ಬರೀ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಾನೇ ಬದುಕಿದ ಬದುಕಿನ ಪುಟಗಳನ್ನು ತೆರೆದು ನೋಡಿದರೆ, ನನ್ನ ಸುತ್ತಮುತ್ತಲಿನವರು, ನನ್ನ ಶಾಲೆಯ ಸಹಪಾಠಿಗಳು, ಕೆಲವೊಮ್ಮೆ ನಾನು ಕೂಡಾ ಈ ಮೇಲಿನ ಸಾಲುಗಳಂತೆಯೇ ಬದುಕಿದ್ದು ನೆನಪಾಗುತ್ತದೆ. ಇನ್ನು ಮನೆಗೆ ಬಿದಿರಿನ ಬುಟ್ಟಿಯಲ್ಲಿ ಹಾವು ಹಿಡಿದುಕೊಂಡು ಭಿಕ್ಷೆ ಬೇಡಲು ಬರುತ್ತಿದ್ದ ಹಾವಾಡಿಗರ ಮಕ್ಕಳು, ತೋಟ ಗದ್ದೆಗಳಿಗೆ ಕೆಲಸ ಮಾಡಲು ಹೋಗುತ್ತಿದ್ದ ಕೂಲಿ ಕಾರ್ಮಿಕರ ಮಕ್ಕಳ ಮೈಮೇಲೆ ಹೆಚ್ಚಿನ ಬಾರಿ ಚಡ್ಡಿಯೊಂದೇ ಇರುತ್ತಿತ್ತು. ಅವರು ಅಂಗಿ ಧರಿಸುತ್ತಿದ್ದದ್ದು ಅಪರೂಪವೇ. ಧರಿಸಿದರೂ ಅದರಲ್ಲಿ ಅದೆಷ್ಟು ತೇಪೆಗಳಿರುತ್ತಿದ್ದವು. ಚಡ್ಡಿಯೋ ಕುಳಿತಿರುತ್ತಿದ್ದ ಜಾಗದಲ್ಲಿ ಸವೆದು ಅದಕ್ಕೂ ತೇಪೆಯ ಮೇಲೆ ತೇಪೆ. ಆಗೆಲ್ಲ